ಚೀನಾದಲ್ಲಿ ಕೊರೊನಾ ಪತ್ತೆಗೆ ಮುನ್ನವೇ ಹರಡಲು ಆರಂಭವಾಗಿತ್ತು – ಅಧ್ಯಯನದಲ್ಲಿ ಬಯಲಾದ ಸತ್ಯ..!
ಚೀನಾದಿಂದ ಇಡೀ ವಿಶ್ವಕ್ಕೆ ಹಬ್ಬಿರುವ ಮಹಾಮಾರಿ ಕೋವಿಡ್ 19 ವೈರಸ್ ಪತ್ತೆಯಾಗಿದೆ ಎಮದು ಅಧಿಕೃತವಾಗಿ ಮಾಹಿತಿ ಹೊರಬೀಳುವ ಮುನ್ನೇ ಅಂದ್ರೆ 2019ರ ಅಕ್ಟೋಬರ್ ತಿಂಗಳಿನಿಂದಲೇ ಹರಡಲು ಆರಂಭಿಸಿತ್ತು ಎಂಬ ಆಘಾತಕಾರಿ ಮಾಹಿತಿಯನ್ನ ಹೊಸ ಅಧ್ಯಯನವೊಂದರಲ್ಲಿ ಬಹಿರಂಗಪಡಿಸಲಾಗಿದೆ.
ಕೆಂಟ್ ನ ಬ್ರಿಟನ್ಸ್ ವಿಶ್ವ ವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಕೋವಿಡ್ 19 ವೈರಸ್ ಮೊದಲ ಬಾರಿಗೆ 2019ರ ಅಕ್ಟೋಬರ್ ತಿಂಗಳಲ್ಲಿಯೇ ಕಾಣಿಸಿಕೊಂಡಿದೆ. ಈ ವರದಿಯನ್ನ ಪಿಎಲ್ಓಸ್ ಪ್ಯಾಥೋಗನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಚೀನಾದಲ್ಲಿ ಮೊದಲ ಕೋವಿಡ್ 19 ಪ್ರಕರಣವು 2019ರ ಡಿಸೆಂಬರ್ ತಿಂಗಳಿನಲ್ಲಿ ವರದಿಯಾಗಿದೆ. ಇದು ವುಹಾನ್ನ ಸಮುದ್ರ ಆಹಾರ ಮಾರುಕಟ್ಟೆಗೆ ಸಂಬಂಧಿಸಿದ್ದಾಗಿದೆ. ಕೊರೊನಾ ವೈರಸ್ ಬಹುಶಃ 2019ರ ನವೆಂಬರ್ 17ನೇ ತಾರೀಖಿನಂದು ಹೊರಹೊಮ್ಮಿದ್ದರಬಹುದು ಎಂದು ಅಂದಾಜಿಸಲಾಗಿದೆ. 2020 ಜನವರಿಯ ವೇಳೆಗೆ ಅದು ವಿಶ್ವಾದ್ಯಂತ ಪಸರಿಸಿದೆ ಎಂದು ಅಂದಾಜಿಸಲಾಗಿದೆ.
ಚೀನಾದ ಕೋವಿಡ್ ವೈರಸ್ ಕುರಿತಾಗಿ ಇನ್ನೂವರೆಗೂ ಸಾಕಷ್ಟು ಗೊಂದಲಗಳಿವೆ… ಚೀನಾದ ವುಹಾನ್ ಲ್ಯಾಬ್ ನಿಂದಲೇ ಹರಡಿದ್ದಾ ಮಾರುಕಟ್ಟೆಯಿಂದ ಹರಡಿದ್ದಾ ಅನ್ನೋ ಪ್ರಶ್ನೆಗಳು ಚೀನಾ ಮೇಲೆ ಅನುಮಾನಗಳಿವೆ.. ಅಮೆರಿಕಾ ಸಹ ಚೀನಾದ ವುಹಾನ್ ಲ್ಯಾಬ್ ನಿಂದಲೇ ವೈರಸ್ ಹರಡಿರುವ ಶಂಕೆ ವ್ಯಕ್ತಪಡಿಸುತ್ತಾ ಆರೋಪಿಸುತ್ತಲೇ ಬಂದಿದೆ.. ಇನ್ನೂ ಇದಕ್ಕೂ ಮೀರಿ ಚೀನಾ ಜೆನೆಟಿಕ್ ವಾರ್ ಗಾಗಿ ಇಡೀ ವಿಶ್ವದ ವಿರುದ್ಧ ಕೊರೊನಾ ಅಸ್ತ್ರ ಪ್ರಯೋಗಿಸಿದೆ ಎಂಬ ಅನುಮಾನಗಳು ಇವೆ…








