ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ರಾಜ್ಯದಲ್ಲಿ ವಿಧಿಸಲಾಗಿರುವ ಗೋ ಹತ್ಯೆ ಕಾಯ್ದೆಯನ್ನ ಹೈ ಕೋರ್ಟ್ ಎತ್ತಿ ಹಿಡಿದಿದೆ. ಅಲ್ದೇ ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿರುವ ನಿಬಂಧನೆಗಳು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ.
ಗೋ ಹತ್ಯೆ ನಿಷೇಧ ಕಾಯ್ದೆಯ ಸಾಂವಿಧಾನಿಕತೆಯನ್ನ ಪ್ರಶ್ನಿಸಿ ಮೊಹಮ್ಮದ್ ಆರಿಫ್ ಜಮೀಲ್ ಸೇರಿದಂತೆ ಅನೇಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಂಬಂಧ ಹೈಕೋರ್ಟ್ನಲ್ಲಿ ವಾದ ಮಂಡಿಸಿದ ರಾಜ್ಯ ಸರ್ಕಾರ, ಸಂವಿಧಾನದಲ್ಲಿನ ತತ್ವಗಳಿಗೆ ಅನುಗುಣವಾಗಿಯೇ ಈ ಸುಗ್ರೀವಾಜ್ಞೆ ಇದೆ ಎಂದು ಪ್ರತಿಪಾದಿಸಿದೆ.
ಥೂ ಎಂಥಾ ‘ಮೃಗಗಳು’ ಇವರು… ವೃದ್ಧ ಪೋಷಕರ ಕೂಡಿ ಹಾಕಿ ಚಿತ್ರಹಿಂಸೆ: ಹಸಿವಿನಿಂದ ತಂದೆ ಸಾವು..!
2012ರ ಜಾನುವಾರು ಗಣತಿಯಲ್ಲಿ 95,16,484 ರಷ್ಟಿದ್ದ ರಾಸುಗಳ ಸಂಖ್ಯೆ 2019ರ ಗಣತಿಯ ವೇಳೆಗೆ 84,69,004ಕ್ಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಅಂದರೆ ಪ್ರತಿದಿನಕ್ಕೆ ಸರಾಸರಿ 652 ದನಗಳ ಹತ್ಯೆಗೈಯಲಾಗ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವರಿಕೆ ಮಾಡಿ ಕೊಟ್ಟಿದೆ.
ಅಲ್ಲದೇ ಮಿರ್ಜಾಪುರ ಪ್ರಕರಣದಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಈ ಕಾಯ್ದೆಯನ್ನ ಸಾಂವಿಧಾನಿಕವಾಗಿ ಮಾನ್ಯ ಎಂದು ದೃಢಪಡಿಸಿದೆ ಎಂದೂ ಹೈಕೋರ್ಟ್ ಮುಂದೆ ರಾಜ್ಯ ಸರ್ಕಾರದ ಪರ ವಕೀಲ ಹೇಳಿದ್ರು. ವಾದ – ಪ್ರತಿವಾದಗಳನ್ನ ಆಲಿಸಿದ ರಾಜ್ಯ ಹೈಕೋರ್ಟ್ ಗೋ ಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಹೇಳಿದೆ.
ಬೀಡಿ ತರಲು ತಡ ಮಾಡಿದ್ದಕ್ಕೆ 10 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel