ಚನ್ನಪಟ್ಟಣ : ನಿನ್ನೆ ಸುದ್ದಿಗೋಷ್ಟಿ ನಡೆಸಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಡಿ.ಕೆ ಶಿವಕುಮಾರ್ ಅವರನ್ನು ಡಿಟೈರ್ಡ್ ಕುದುರೆಗಳು ಎಂದಿದ್ದ ಎಂಎಲ್ ಸಿ ಸಿ.ಪಿ. ಯೋಗೇಶ್ವರ್ ಅವರನ್ನು ಜೆಡಿಎಸ್ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಚನ್ನಪಟ್ಟಣದಲ್ಲಿ ತಮ್ಮ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡರು, ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. “ಕಾಡಿಬೇಡಿ ಪರಿಷತ್ ಸ್ಥಾನ ಪಡೆದಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜನರಿಂದ ಆಯ್ಕೆ ಆಗಿರುವ ನಮ್ಮ ಶಾಸಕರನ್ನು ನಿವೃತ್ತಿ ಕುದುರೆ ಎನ್ನುವ ನೀವು, ಜನರಿಂದ ತಿರಸ್ಕರಿಸಲ್ಪಟ್ಟ ಸತ್ತ ಕುದುರೆ ಎಂದು ಜೆಡಿಎಸ್ ಮುಖಂಡರು ಜರಿದ್ದಾರೆ.
ಕಳೆದ ಚುನಾವಣೆಯಲ್ಲಿ ಸೋತ ನೀವು ಇಷ್ಟು ದಿನ ಎಲ್ಲಿದ್ರಿ? ನೀವೇ ಹೇಳಿರುವಂತೆ ಯಾವ ಅಜ್ಞಾತ ವಾಸದಲ್ಲಿದ್ರಿ? ಎಂಬುದನ್ನು ತಿಳಿಸಿ. ಅಧಿಕಾರ ಇದ್ದರಷ್ಟೆ ನೀವು ಜನಸೇವೆ ಮಾಡೋದಾ? ಎಂದು ಯೋಗೇಶ್ವರ್ ವಿರುದ್ಧ ಕೆಂಡಕಾರಿದ ಜೆಡಿಎಸ್ ಮುಖಂಡರು, ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡಿದರೆ ನಾವು ಸುಮ್ಮನೆ ಇರೋದಿಲ್ಲ ಎಚ್ಚರಿಕೆ ನೀಡಿದ್ದಾರೆ.
ಇನ್ನು ಸುದ್ದಿಗೋಷ್ಟಿ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರ ಅಧ್ಯಕ್ಷ ರಾಂಪುರ ರಾಜಣ್ಣ. ಹಿರಿಯ ಮುಖಂಡ ಹಾಪ್ ಕಾಮ್ಸ್ ದೇವರಾಜು, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು ಉಪಸ್ಥಿತರಿದ್ದರು.
—————————————————————————————————————————————————————–
‘HALF CHITRANNA’ | KANNADA SHORT FILM 2020 | MANOJ P NADALUMANE, RITVIK MURALIDHAR.








