ಸಿಪಿಎಲ್ 2020 – ಗಯಾನ ವಾರಿಯರ್ಸ್ಗೆ ಸುಲಭವಾಗಿ ಶರಣಾದ ಬಾರ್ಬೊಡಸ್ ಟ್ರಿಡೆಂಟ್ಸ್
ಕೆರೆಬಿಯನ್ ಪ್ರೀಮಿಯರ್ ಲೀಗ್ ನ 22 ನೇ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಎಂಟು ವಿಕೆಟ್ಗಳಿಂದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡವನ್ನು ಸೋಲಿಸಿದೆ.
ಈ ಮೂಲಕ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಆಡಿರುವ ಎಂಟು ಪಂದ್ಯಗಳಲ್ಲಿ ಗಯನಾ ವಾರಿಯರ್ಸ್ ತಂಡ 4 ಗೆಲುವು ಮತ್ತು ನಾಲ್ಕು ಸೋಲುಗಳೊಂದಿಗೆ ಒಟ್ಟು ಎಂಟು ಅಂಕಗಳನ್ನು ಪಡೆದುಕೊಂಡಿದೆ. ಇನ್ನೊಂದೆಡೆ ಬಾರ್ಬೊಡಸ್ ತಂಡ ಐದನೇ ಸ್ಥಾನದಲ್ಲಿದ್ದು, ಆಡಿರುವ ಎಂಟು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇನ್ನುಳಿದ ಆರು ಪಂದ್ಯಗಳನ್ನು ಸೋತು ನಾಲ್ಕು ಅಂಕಗಳನ್ನು ಪಡೆದುಕೊಂಡಿದೆ.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಮೈದಾನದಲ್ಲಿ ಟಾಸ್ ಗೆದ್ದ ಬಾರ್ಬೊಡಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಬಾರ್ಬೊಡಸ್ ತಂಡದ ಲೆಕ್ಕಚಾರವನ್ನು ಗಯಾನ ವಾರಿಯರ್ಸ್ ತಂಡದ ಬೌಲರ್ ಗಳು ಬುಡಮೇಲುಗೊಳಿಸಿದ್ರು. ಪರಿಣಾಮ ಬಾರ್ಬೊಡಸ್ ತಂಡ ನಿಗದಿತ 20 ಓವರ್ ಗಳಲ್ಲಿ 92 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಬಾರ್ಬೊಡಸ್ ಪರ ಸ್ಯಾಂಟ್ನರ್ 36 ರನ್ ಗಳಿಸಿದ್ರೆ, ರಶೀದ್ ಖಾನ್ 19 ರನ್, ಮೇಯರ್ 10 ರನ್ ಹಾಗೂ ಹೇಡನ್ ವಾಲ್ಸ್ಯ್ 12 ರನ್ ಗಳಿಸಿದ್ರು. ಇನ್ನುಳಿದ ಬ್ಯಾಟ್ಸ್ ಮೆನ್ ಗಳು ಒಂದಂಕಿ ಮೊತ್ತಕ್ಕೆ ಸೀಮಿತರಾದ್ರು. ವಾರಿಯರ್ಸ್ ತಂಡದ ಮಾರಕ ದಾಳಿ ನಡೆಸಿದ್ದ ನವೀನ್ ಉಲ್ ಹಕ್ ನಾಲ್ಕು ವಿಕೆಟ್ ಉರುಳಿಸಿದ್ರೆ, ಸಿಂಕ್ಲರ್ ಎರಡು ವಿಕೆಟ್ ಪಡೆದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಗಯಾನ ವಾರಿಯರ್ಸ್ ತಂಡ 16.4 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಬ್ರೆಂಡನ್ ಕಿಂಗ್ ಅಜೇಯ 51 ರನ್ ಸಿಡಿಸಿದ್ರೆ, ಪೂರನ್ ಅಜೇಯ 18 ರನ್ ಗಳಿಸಿದ್ರು. ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ನವೀನ್ ಉಲ್ ಹಕ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.