ಜನಪ್ರಿಯ ಕೋಚ್, ಶ್ರೇಷ್ಠ ಆಟಗಾರರಿಗೆ ಮಾರ್ಗದರ್ಶಕರಾಗಿದ್ದ ವಾಸುದೇವ್ ವಿಧಿವಶ
ಜನಪ್ರಿಯ ಕೋಚ್ , ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿ, ಶ್ರೇಷ್ಠ ಆಟಗಾರರಿಗೆ ಮಾರ್ಗದರ್ಶಕರಾಗಿದ್ದ ವಾಸುದೇವ್ ಅವರು ನಿಧನರಾಗಿದ್ದಾರೆ. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಸು ಅವರು 82 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕ್ರಿಕೆಟಿಗನಾಗಿ ಪರಾಂಜಪೆ ಅವರ ವೃತ್ತಿಜೀವನವು 1956ರಿಂದ ಆರಂಭವಾಗಿತ್ತು. ಅವರ ಶ್ರೇಷ್ಠ ಕ್ರಿಕೆಟ್ ಚಾಣಾಕ್ಷತೆ, ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಮತ್ತು ಯುವ ಮತ್ತು ಅನುಭವಿಗಳನ್ನು ಸಮಾನವಾಗಿ ಪ್ರೇರೇಪಿಸುವ ಅಸಾಧಾರಣವಾದ ಕೌಶಲ್ಯವು ಅವರನ್ನು ಶ್ರೇಷ್ಠರ ಸ್ಥಾನಕ್ಕೆ ಏರಿಸಿತು. ಅವರ ಮಗ ಜತಿನ್ – ಭಾರತದ ಮಾಜಿ ಬ್ಯಾಟ್ಸ್ ಮೆನ್ ಮತ್ತು ರಾಷ್ಟ್ರೀಯ ಆಯ್ಕೆಗಾರ. ಅಲ್ಲದೇ ಜತಿನ್ ಅವರು ಆನಂದ್ ವಾಸು ಜೊತೆಗೂಡಿ ಕಳೆದ ವರ್ಷ ತಮ್ಮ ತಂದೆಯ ಕುರಿತಾಗಿ “ದಿ ಕ್ರಿಕೆಟ್ ದ್ರೋಣ – ವಸೂ ಪರಾಂಜಪೆಯ ಪ್ರೀತಿಗಾಗಿ” ಎಂಬ ಪುಸ್ತಕವನ್ನು ಬರೆದು ಲೋಕಾರ್ಪಣೆಗೊಳಿಸಿದ್ದರು.
ಸುನಿಲ್ ಗವಾಸ್ಕರ್ ನಿಂದ ರೋಹಿತ್ ಶರ್ಮಾ, ದಿಲೀಪ್ ವೆಂಗ್ಸರ್ಕರ್ನಿಂದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ನಿಂದ ರಮೇಶ್ ಪೊವಾರ್ ಮತ್ತು ಅನಿಲ್ ಕುಂಬ್ಳೆಯಿಂದ ಡಬ್ಲ್ಯೂ.ವಿ. ರಾಮನ್ ವರೆಗೂ ನೂರಾರು ಅಂತಾರಾಷ್ಟ್ರೀಯ ಕ್ರಿಕೆಟಿಗರು ಪರಾಂಜಪೆಯವರ ಸಕಾಲಿಕ ಸಲಹೆಯಿಂದ ತಮ್ಮ ವೃತ್ತಿಜೀವನದಲ್ಲಿ ಗೆಲುವು ಸಾಧಿಸಿದ್ದಾರೆ.