ಚಕ್ರವ್ಯೂಹದಲ್ಲಿ ಕ್ರಿಕೆಟ್ ಕಿಂಕರ ಕೊಹ್ಲಿ..! Kohli saakshatv
ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ ಸದ್ಯ ಗಾಯಗೊಂಡಿರುವ ಹೆಬ್ಬುಲಿಯಂತೆ ಆಗಿದ್ದಾರೆ. ಒಂದು ಕಡೆ ನಾಯಕತ್ವದಿಂದ ವಜಾಗೊಳಿಸಿ ಅವಮಾನಿಸದವರಿಗೆ ಮತ್ತೊಂದು ಕಡೆ ತಮ್ಮ ಬ್ಯಾಟಿಂಗ್ ಪಾರ್ಮ್ ಬಗ್ಗೆ ಟೀಕಿಸುತ್ತಿವವರಿಗೆ ಉತ್ತರ ನೀಡಲೇಬೇಕಾದ ಒತ್ತಡದಲ್ಲಿದ್ದಾರೆ.
ಮೈದಾನದಲ್ಲಿ ಸಿಂಹದ ಘರ್ಜಸಿ ಎದುರಾಗಳಿಗಳ ಶಿಕಾರಿ ಆಡುತ್ತಿದ್ದ ವಿರಾಟ್ ಸದ್ಯ ತುಸು ಮಂಕಾಗಿದ್ದಾರೆ. ತಮ್ಮನ್ನು ಕೆಣಕಿದವರ ವಿರುದ್ಧ ರೆಡ್ ಬುಲ್ ನಂತೆ ಕಾಲ್ಕೆರೆದು ನಿಲ್ಲುತ್ತಿದ್ದ ಕೊಹ್ಲಿ ಈಗ ಗುಪ್ ಚುಪ್ ಆಗಿದ್ದಾರೆ.
ಹೌದು..! ವಿರಾಟ್ ಕೊಹ್ಲಿ ಅಂದರೇ ಎಲ್ಲರ ಕಣ್ಣ ಮುಂದೆ ಬರೋದು ಅವರ ರೋಷವೇಶ.. ಕ್ರಿಕೆಟ್ ಮಾದರಿಗಳ ಬೇದವಿಲ್ಲದೇ, ಸ್ವದೇಶಿ – ವಿದೇಶಿ ಅನ್ನೋ ಲೆಕ್ಕಾಚಾರ ವಿಲ್ಲದೇ ಆನೆ ನಡೆದಿದ್ದೇ ದಾರಿ ಎಂಬಂತೆ ವಿರಾಟ್ ಕೊಹ್ಲಿ ಘೀಳಿಡುತ್ತಿದ್ದರು. ಆದ್ರೆ ಈಗ ವಿರಾಟ್ ಆ ಅಬ್ಬರ, ಆರ್ಭಟ ಕಾಣೆಯಾಗಿದೆ. ಇದಕ್ಕೆ ಕಾರಣ ವಿರಾಟ್ ಅನುಭವಿಸುತ್ತಿರುವ ಬ್ಯಾಟಿಂಗ್ ವೈಫಲ್ಯ..
ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದರೇ ಅಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತಿತ್ತು. ಇಲ್ಲಾ ಇತಿಹಾಸದ ಪುಟಗಳಲ್ಲಿದ್ದ ದಾಖಲೆ ಚಿಂದಿಯಾಗುತ್ತಿತ್ತು. ಆದ್ರೆ ಕಳೆದ ಎರಡು ವರ್ಷಗಳಿಂದ ವಿರಾಟ್ ಕಷ್ಟದ ಕಾಲವನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಸೆಂಚೂರಿಗಳ ಮೇಲೆ ಸೆಂಚೂರಿಗಳನ್ನು ಸಿಡಿಸುತ್ತಿದ್ದ ವಿರಾಟ್ ಈಗ ಒಂದೇ ಒಂದು ಸೆಂಚೂರಿ ಸಿಡಿಸಿ ವರ್ಷಗಳೇ ಕಳೆದಿವೆ.
ಆಸ್ಟ್ರೇಲಿಯಾ ಪ್ರವಾಸದಲ್ಲಾಗಲೀ, ಇಂಗ್ಲೆಂಡ್ ಪ್ರವಾಸದಲ್ಲಾಗಲೀ, ನ್ಯೂಜಿಲೆಂಡ್‌ನಲ್ಲಾಗಲೀ ಕೊಹ್ಲಿ ಬ್ಯಾಟ್ ಆಗಸ ನೋಡಲೇ ಇಲ್ಲ. ವಿರಾಟ್ ಕೊಹ್ಲಿ 70 ಶತಕಗಳಿಗೆ ಅಂಟಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಶತಕದ ಸಂಭ್ರಮ ಆಚರಿಸಿಕೊಳ್ಳದ ವಿರಾಟ್, ದಕ್ಷಿಣಾ ಆಫ್ರಿಕಾದ ನೆಲದಲ್ಲಿ ಅಬ್ಬರಿಸಲೇಬೇಕು. ಹೀಗಾಗಿಯೇ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ವಿರಾಟ್ ನೆಟ್ಸ್ ಗಳಲ್ಲಿ ಬೆವರಿಳಿಸುತ್ತಿದ್ದಾರೆ.
ದ್ರಾವಿಡ್ ಸಮ್ಮುಖದಲ್ಲಿ ಗಂಟೆಗಟ್ಟಲೇ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ವಿರಾಟ್, ರಾಹುಲ್ ಅವರಿಂದ ಬ್ಯಾಟಿಂಗ್ ಟಿಪ್ಸ್ ಪಡೆದುಕೊಳ್ಳುತ್ತಿದ್ದಾರೆ.
ಇದಲ್ಲದೇ ಏಕದಿನ ನಾಯಕತ್ವದಿಂದ ವಜಾಗೊಂಡು ಅವಮಾನ ಅನುಭವಿಸಿರುವ ವಿರಾಟ್ ತಮ್ಮ ನಾಯಕತ್ವದ ತಾಕತ್ತನ್ನ ಮತ್ತೆ ತೋರಿಸಲೇಬೇಕಿದೆ. ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿರುವ ವಿರಾಟ್, ಆಫ್ರಿಕಾ ನೆಲದಲ್ಲಿ ಗಗನ ಕುಸುಮವಾಗಿರುವ ಟೆಸ್ಟ್ ಸರಣಿ ಟ್ರೋಫಿ ಗೆದ್ದು ಬಿಸಿಸಿಐಗೆ ದಿಟ್ಟ ಉತ್ತರ ನೀಡಬೇಕಾಗಿದೆ.
ಒಟ್ಟಾರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ವಿರಾಟ್ ಕೊಹ್ಲಿ, ಕರ್ಮೋಡಗಳನ್ನು ಸೀಳುತ್ತಾ.. ಚಕ್ರವ್ಯೂಹವನ್ನ ಬೇಧಿಸಿ ಗುಡುಗು ಸಿಡಿಲುಗಳ ದಿಬ್ಬಣ ನಡೆಸಲೇಬೇಕಿದೆ.







