ದೇಸಿ ಕ್ರಿಕೆಟ್ ಟೂರ್ನಿಗಳಿಗೆ ಬಿಸಿಸಿಐ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.. !
ದೇಸಿ ಕ್ರಿಕೆಟ್ ಗೆ ಬಿಸಿಸಿಐ ಮುಹೂರ್ತ ಫಿಕ್ಸ್ ಮಾಡಿದೆ. ಡಿಸೆಂಬರ್ ನಲ್ಲಿ ಪ್ರತಿಷ್ಠಿತ ದೇಸಿ ಕ್ರಿಕೆಟ್ ಟೂರ್ನಿಯಾಗಿರುವ ರಣಜಿ ಪಂದ್ಯಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ರೆ ಇರಾನಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಟೂರ್ನಿಗಳು ಈ ವರ್ಷ ಕೂಡ ನಡೆಯುವುದಿಲ್ಲ.
ಇನ್ನು ಸೆಪ್ಟಂಬರ್ ನಲ್ಲಿ ಸಯ್ಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ಕ್ರಿಕೆಟ್ ಮತ್ತು ವಿಜಯ ಹಜಾರೆ ಏಕದಿನ ಟೂರ್ನಿಗಳು ನಡೆಯಲಿವೆ.
ಇದೀಗ ಬಿಸಿಸಿಐ ತಾತ್ಕಾಲಿಕ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಈ ವೇಳಾಪಟ್ಟಿಯ ಪ್ರಕಾರ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಸೆಪ್ಟಂಬರ್ -ಅಕ್ಟೋಬರ್ 21ರೊಳಗಡೆ ಮುಗಿಸುವ ಯೋಚನೆಯಲ್ಲಿದೆ ಬಿಸಿಸಿಐ
ಹಾಗೇ ವಿಜಯ ಹಜಾರೆ ನವೆಂಬರ್ 21ರಿಂದ ಮತ್ತು ರಣಜಿ ಟೂರ್ನಿಯ ಪಂದ್ಯಗಳನ್ನು ಡಿಸೆಂಬರ್ 21ರಿಂದ ಮಾರ್ಚ್ 22 ರವರೆಗೆ ನಡೆಸುವ ಚಿಂತನೆಯಲ್ಲಿದೆ.
ಇನ್ನುಳಿದಂತೆ 23 ವಯೋಮಿತಿ ಟೂರ್ನಿ ಅಕ್ಟೋಬರ್ ನವೆಂಬರ್ ನಲ್ಲಿ, ಸಿಕೆ ನಾಯ್ಡು ಟೂರ್ನಿ ಯು ಡಿಸೆಂಬರ್ 21ರಿಂದ ಮಾರ್ಚ್ 22ರವರೆಗೆ ನಡೆಸಲು ಪ್ಲಾನ್ ಮಾಡಿಕೊಂಡಿದೆ.
ಸೀನಿಯರ್ ಮಹಿಳೆಯರ ಟಿ ಟ್ವೆಂಟಿ ಲೀಗ್ ಅಕ್ಟೋಬರ್ 21ರಿಂದ ಮತ್ತು ಏಕದಿನ ಪಂದ್ಯಗಳು ನವೆಂಬರ್ 21ರಿಂದ ಆರಂಭವಾಗಲಿದೆ.
ಇನ್ನುಳಿದಂತೆ ಬಾಲಕರ 19 ವಯೋಮಿತಿ, ಮಹಿಳೆಯ 23 ವಯೋಮಿತಿಯ ಟೂರ್ನಿಗಳನ್ನು ಸಂಘಟಿಸಲು ಕೂಡ ಬಿಸಿಸಿಐ ವೇಳಾಪಟ್ಟಿ ರೆಡಿ ಮಾಡಿಕೊಂಡಿದೆ.