Sport – ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಗೆ ಸಿದ್ಧವಾದ ರಾಹುಲ್ ಚಾಹರ್…
ಭಾರತ ಕ್ರಿಕೆಟ್ ತಂಡದ ಬೌಲರ್ ರಾಹುಲ್ ಚಹಾರ್ ಅವರು ಬೆಂಗಳೂರು ಮೂಲದ ಫ್ಯಾಷನ್ ಡಿಸೈನರ್ ಇಶಾನಿ ಅವರನ್ನು ಮಾರ್ಚ್ 9 ರಂದು ವಿವಾಹವಾಗಲಿದ್ದಾರೆ. ಆಗ್ರಾದ ನಿವಾಸಿ ರಾಹುಲ್ ಚಹಾರ್ ಡಿಸೆಂಬರ್ 2019 ರಲ್ಲಿ ಜೈಪುರದಲ್ಲಿ ಇಶಾನಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಈ ಜೋಡಿ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಕೊಳ್ಳಲಿದೆ. ರಾಹುಲ್ ಕುಟುಂಬ ಮದುವೆ ಸಿದ್ಧತೆಗಾಗಿ ಗೋವಾ ತಲುಪಿದೆ.
ರಾಹುಲ್ ಚಹಾರ್ ಅವರ ವಿವಾಹಕ್ಕೆ ಭಾರತ ತಂಡದ ಸದಸ್ಯರೊಂದಿಗೆ ಅನೇಕ ಐಪಿಎಲ್ ಆಟಗಾರರನ್ನು ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಹುಲ್ ಸೋದರ ಸಂಬಂಧಿ ಹಾಗೂ ಭಾರತ ತಂಡದ ವೇಗಿ ದೀಪಕ್ ಚಹಾರ್ ಕೂಡ ನೇರವಾಗಿ ಗೋವಾ ತಲುಪಲಿದ್ದಾರೆ. ರಾಹುಲ್ ಕುಟುಂಬ ಮದುವೆಗೆ ಗೋವಾ ತಲುಪಿದೆ. ರಾಹುಲ್ ಮದುವೆಯ ಆರತಕ್ಷತೆ ಆಗ್ರಾದ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದೆ. ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಐಪಿಎಲ್ 2022ರಲ್ಲಿ ರಾಹುಲ್ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ
ಕ್ರಿಕೆಟಿಗ ರಾಹುಲ್ ಚಹಾರ್ ಅವರನ್ನು ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 5.25 ಕೋಟಿಗೆ ಸೇರಿಸಿಕೊಂಡಿದೆ. ಈ ಹಿಂದೆ ರಾಹುಲ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು. 2018 ರಿಂದ 2021 ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ರಾಹುಲ್ ಚಹಾರ್ ಭಾರತಕ್ಕಾಗಿ ಇದುವರೆಗೆ ಒಂದು ಏಕದಿನ ಪಂದ್ಯ ಮತ್ತು ಐದು ಟಿ20 ಪಂದ್ಯಗಳನ್ನು ಆಡಿದ್ದಾರೆ.








