ತಣ್ಣಗಿರೋ ಚಪಾತಿ ಕೊಟ್ಟ ಕಾರಣಕ್ಕೆ ಡಾಬಾ ಮಾಲೀಕನಿಗೆ ಗುಂಡಿಟ್ಟ ಕಿಡಿಗೇಡಿಗಳು
ತಣ್ಣಗಿರುವ ಚಪಾತಿ ನೀಡಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಕಿಡಿಗೇಡಿಗಳು ಗುಂಡುಹಾರಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಡಾಬಾ ಮಾಲೀಕ ಅವದೇಶ್ ಯಾದವ್ ಕಾಲಿಗೆ ಆರೋಪಿಗಳಾದ ಅಮಿತ್ ಚೌಹಾಣ್ ಹಾಗೂ ಕೌಸ್ತುಬ್ ಮಿಶ್ರಾ ಗುಂಡು ಹಾರಿಸಿದ್ದಾರೆ. ಸದ್ಯ ಅವದೇಶ್ ರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
‘ಆಝಾಧಿ’ ಘೋಷಣೆ ಕೂಗಿದ 6 ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಕೇಸ್..!
ರಾತ್ರಿ. ಸು. 11.30ರ ವೇಳೆ ಡಾಬಾ ಬಳಿ ಬಂದಿದ್ದ ಇಬ್ಬರು ಯುವಕರು ತಮ್ಮ ಆರ್ಡರ್ ನೀಡಿದ್ರು. ಈ ವೇಳೆ ಆಹಾರ ಸರ್ವ್ ಮಾಡಿದ ಬಳಿಕ ಚಪಾತಿ ತಣ್ಣಗಿದೆ ಎಂದು ದೂರಿದ್ಧಾರೆ. ಈ ವೇಳೆ ಯುವಕರು ಹಾಗೂ ಮಾಲೀಕನ ನಡುವೆ ಗಲಾಟೆ ಆರಂಭವಾಗಿದ್ದು, ಜಗಳ ತಾರಕಕ್ಕೇರಿದೆ. ನಂತರ ಓರ್ವ ಯುವಕ ತನ್ನ ಬಳಿಯಿದ್ದ ಗನ್ ತೆಗೆದೋನೆ ಮಾಲೀಕನ ಕಾಲಿಗೆ ಗುಂಡು ಹಾರಿಸಿದ್ದಾನೆ. ಸ್ಥಳೀಯರು ಡಾಬಾ ಮಾಲೀಕನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಸಾತ್ ಡಾಬಾ ಮಾಲೀಕ ಬಚಾವ್ ಆಗಿದ್ದಾರೆ. ಇತ್ತ ಪೊಲೀಸರೂ ಇಬ್ಬರೂ ಆರೋಪಿಗಳನ್ನ ಅರೆಸ್ಟ್ ಮಾಡಿ ಗನ್ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








