ಯುವಕನ ಹತ್ಯೆಗೈದು ಠಾಣೆ ಮುಂದೆ ಶವ ಎಸೆದ ದುಷ್ಕರ್ಮಿ
ಕೇರಳ : 19 ವರ್ಷದ ಯುವಕನೊಬ್ಬನ ಹತ್ಯೆಗೈದು ಆತನ ಶವವನ್ನ ಪೊಲೀಸ್ ಠಾಣೆಯ ಮುಂದೆಯೇ ಎಸೆದಿರುವ ಘಟನೆ ಕೇರಳದ ಕೊಟ್ಟಾಯುಂನಲ್ಲಿ ಬೆಳಕಿಗೆ ಬಂದಿದೆ..
ಶಾನ್ ಬಾಬು ಮೃತ ದುರ್ದೈವಿ.. ಶವವನ್ನು ಠಾಣೆ ಬಳಿ ಎಸೆದ ಆರೋಪಿ ಜೋಮೋನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಜೋಮೋನ್ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳಲು ಸಹ ಯತ್ನಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಶಾನ್ ತನಗೆ ಸ್ಪರ್ಧೆ ನೀಡುತ್ತಿದ್ದು, ತನ್ನ ಪ್ರದೇಶದ ಮೇಲೆ ಹಿಡಿತ ಸಾಧಿಸಲು ತನ್ನ ಮೇಲೆ ದಾಳಿ ಮಾಡಿದ್ದನು. ಹೀಗಾಗಿ ತಾನು ಅವನ ಮೇಲೆ ದಾಳಿ ಮಾಡಲು ಯತ್ನಿಸಿದೆ. ಆದರೆ ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಆರೋಪಿ ಬಾಯ್ದಿಬಿಟ್ಟಿದ್ದಾನೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟದ ಜಾಲದಲ್ಲಿ ತೊಡಗಿರುವ ಎರಡು ಗ್ಯಾಂಗ್‍ಗಳ ನಡುವಿನ ಹಿಂಸಾಚಾರವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.