ಸೆಲ್ಫಿ ಕ್ರೇಜ್ ಗೆ ಬಿದ್ದು ಜಲಸಮಾಧಿಯಾದ ಪ್ರೇಮಿಗಳು..!
ಕಾರವಾರ : ಈಗಿನ ಯುವಕ ಯುವತಿಯರು ಸೆಲ್ಫಿ ಕ್ರೇಜ್ ಎಷ್ಟರ ಮಟ್ಟಿಗಿದೆಯಂದ್ರೆ , ಪ್ರಾಣದ ಜೊತೆಯಲ್ಲೇ ಚೆಲ್ಲಾಟವಾಡ್ತಾರೆ. ವಿಭಿನ್ನವಾಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಹೋಜಿಗೆ ಬಿದ್ದು ಎಷ್ಟೋ ಜನರು ಪ್ರನವನ್ನೇ ಕಳೆದುಕೊಮಡಿದ್ದಾರೆ. ಆದ್ರೂ ಸಹ ಆಗಾಗ ಇಂತಹ ಪ್ರೆಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹದ್ದೇ ಘಟನೆ ಈಗ ಕಾರವಾರದಲ್ಲೂ ನಡೆದುಹೋಗಿದೆ. ಜೋಡಿಯೊಂದು ನದಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಕಾಲುಜಾರಿ ಸೇತುವೆ ಕೆಳಗೆ ಪ್ರೇಮಿಗಳು ಬಿದ್ದು ನಾಪತ್ತೆಯಾಗಿದ್ದಾರೆ.ಈ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಸೂಪಾ ಡ್ಯಾಂ ಬಳಿ ಇರುವ ಕಾಳಿ ಸೇತುವೆ ಬಳಿ ನಡೆದಿದೆ.
ಸಂಜೆ ಗಣೇಶಗುಡಿಯ ಡ್ಯಾಂ ಭಾಗದಲ್ಲಿ ದಾಂಡೇಲಿಯಿಂದ ಆಟೋದಲ್ಲಿ ಬಂದು ಗಣೇಶಗುಡಿಯ ಸೂಫಾ ಡ್ಯಾಮ್ ಗೆ ಭೇಟಿ ನೀಡಿದ್ದ ಪ್ರೇಮಿಗಳು, ಡ್ಯಾಮ್ ಎದುರು ಭಾಗದಲ್ಲಿ ಇರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಈ ವೇಳೆ ಇಬ್ಬರೂ ಕಾಲುಜಾರಿ ಕಾಳಿ ನದಿಗೆ ಬಿದ್ದಿದ್ದು ತೇಲಿ ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಪ್ರೇಮಿಗಳಿಬ್ಬರೂ ಮೃತಪಟ್ಟಿರಬಹುದೆಂದು ಹೇಳಲಾಗ್ತಿದೆ.
ತಮ್ಮದೇ ಪಕ್ಷದ ಸಚಿವರ ವಿರುದ್ಧ ಪ್ರತಾಪ್ ಸಿಂಹ ಗರಂ








