ನಿದ್ದೆ ಮಾಡಿದ್ದೇ ತಪ್ಪಾಗಿ ಹೋಯ್ತೆ : ಸೊಸೆಯನ್ನ ಥಳಿಸಿದ ಅತ್ತೆ – ಮಾವ
ಅಹಮದಾಬಾದ್ : ಮಧ್ಯಾಹ್ನ ನಿದ್ದೆ ಮಾಡಿದ್ದ ಸೊಸೆಗೆ ಅತ್ತೆ ಮಾವ ಸೇರಿ ಮನಸೋಇಚ್ಛೆ ಥಳಿಸಿರುವ ಘಟನೆ ಗುಜರಾತ್ ನ ಅಹ್ಮದಾಬಾದ್ ಶಾಹಿಬಾಗ್ ನಲ್ಲಿ ನಡೆದಿದೆ.. ಮನೆಯ ಕೆಲಸವನ್ನು ಮಾಡಿ ಸುಸ್ತಾಗಿದ್ದ ಕಾರಣಕ್ಕೆ ಹೋಗಿ ಮಲಗಿದ್ದ ಸೊಸೆಯನ್ನು ನೋಡಿದ ಅತ್ತೆ, ಮಾವ ಹೊಡೆದು ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾರೆ.
2016ರಲ್ಲಿ ಮೆಹ್ಸಾನಾದಲ್ಲಿರುವ ಕಾಡಿಯ ವ್ಯಕ್ತಿಯೊಬ್ಬನನ್ನು ಸಂತ್ರಸ್ತೆ ಮದುವೆಯಾದಳು.. ಪತಿ ಹಾಗೂ ತನ್ನ ಅತ್ತೆ-ಮಾವನೊಂದಿಗೆ ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದಳು. ಆದ್ರೆ ಆಕೆ ಮಧ್ಯಾಹ್ನ ನಿದ್ದೆ ಮಾಡುವುದನ್ನ ಆಕೆಯ ಅತ್ತೆ ಮಾವ ಸಹಿಸಿಕೊಳ್ತಾಯಿರಲಿಲ್ಲ.. ಅದನ್ನ ವಿರೋಧಿಸುತ್ತಿದ್ದರು.. ಆದ್ರೆ ಇತ್ತೀಚೆಗೆ ಮಧ್ಯಾಹ್ನ ನಿದ್ದೆ ಮಾಡಿದ್ದಾಗಿ ಬಂದು ಥಳಿಸಿದ್ದಾರೆ ಎಂದು ಸಂತ್ರಸ್ತೆಯು ದೂರಿದ್ದಾರೆ..
ನಾನು ಮುಂಜಾನೆ ಬೇಗೆ ಏಳುವುದರಿಂದ ನನಗೆ ಮಧ್ಯಾಹ್ನ ಬರುವ ನಿದ್ರೆ ತಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಮೈಮರೆತು ನಿದ್ದೆ ಮಾಡ್ತಿದ್ದನ್ನ ಕಂಡು ಅತ್ತೆ ಮತ್ತು ಮಾವ ಇಬ್ಬರೂ ಹೊಡೆಯಲು ಪ್ರಾರಂಭಿಸಿದ್ದರು.
ಅಂದ್ಹಾಗೆ ಪತಿಯೂ ಸಹ ಆಗಾಗ ಕಿರುಕುಳ ನೀಡ್ತಿದ್ದ ಎನ್ನಲಾಗಿದೆ.. ಮೊದಲ ಬಾರಿಗೆ ತನ್ನ ಪತಿ ಹೊಡೆದಾಗ ಕಾಡಿ ಪೊಲೀಸರಿಗೆ ಮಹಿಳೆ ದೂರು ಸಲ್ಲಿಸಿದ್ದಾಗ , ರಾಜಿ ಮಾಡಿಕೊಂಡು ಪತಿ ಜೊತೆಗೆ ವಾಸಿಸಲು ನಿರ್ಧರಿಸಿದ್ದಳು. ಆದರೆ ಅತ್ತೆ ಮಾವನ ಕಿರುಕುಳ ನಿರಂತರವಾಗಿತ್ತು. ಅಲ್ಲದೇ ಆಕೆ ಗರ್ಭಿಣಿಯಾಗಿದ್ದಾಗಲೂ ತನ್ನ ಪತಿ ಮತ್ತು ಅತ್ತೆ ಮಾವ ನನಗೆ ಸಹಾಯ ಮಾಡದೇ ಆಕೆಯನ್ನ ಹೆತ್ತವರ ಮನೆಗೆ ಕಳುಹಿಸಿದ್ದರು ಎಂದು ಹಲ್ಲೆಗೊಳಗಾದ ಸೊಸೆ ಹೇಳಿಕೊಂಡಿದ್ದಾಳೆ.
ಅಲ್ಲದೇ 2017 ರಲ್ಲಿ ನಾವು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೆ. ಆದ್ರೆ ಗಂಡು ಮಗು ಆಗದ ಕಾರಣಕ್ಕೆ ಅವರು ನನಗೆ ತುಂಬಾನೇ ಕಿರುಕುಳ ನೀಡುತ್ತಿದ್ದರು. ಥಳಿಸುತ್ತಿದ್ರು. ಅಲ್ಲದೇ ನನ್ನನ್ನ ಮನೆಯಿಂದ ಹೊರ ಹಾಕಿದ್ದಾರೆ. ಸಮುದಾಯದ ನಾಯಕರ ಹಸ್ತಕ್ಷೇಪದ ಹೊರತಾಗಿಯೂ, ಪತಿ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ ಎಂದು ಮಹಿಳೆಯು ಆರೋಪ ಮಾಡಿದ್ದಾರೆ.








