ಒಡಿಶಾದ ಚಿನ್ನಾಭರಣ ವ್ಯಾಪಾರಿಯಿಂದ ₹5 ಲಕ್ಷ ಲಂಚ ಪಡೆದ ಐಟಿ ಅಧಿಕಾರಿ ಬಂಧನ
ಖುರ್ದಾ ಪಟ್ಟಣದ ಮಾರ್ವಾಡಿ ಪಟ್ಟಿ ಪ್ರದೇಶದ ಶಾಂತಿ ಜ್ಯುವೆಲರ್ ಮಾಲೀಕ ದೇಬೇಂದ್ರ ಸಾಹು ಎಂಬಾತನಿಂದ ₹5 ಲಕ್ಷ ವಸೂಲಿ ಮಾಡುತ್ತಿದ್ದಾಗ ಆದಾಯ ತೆರಿಗೆ ಅಧಿಕಾರಿ ಸುಮನ್ ಸುಂದರ್ ಸಾಹು ಅವರನ್ನು ಬಂಧಿಸಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
“ಸಾಹೂ ಜ್ಯುವೆಲ್ಲರಿ ಅಂಗಡಿ ಮಾಲೀಕರಿಂದ ₹ 40 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು ಮತ್ತು ₹ 10 ಲಕ್ಷ ಮೌಲ್ಯದ ಚಿನ್ನಾಭರಣಗಳು ಮತ್ತು ₹ 5 ಲಕ್ಷವನ್ನು ಎರಡು ಹಂತಗಳಲ್ಲಿ ತೆಗೆದುಕೊಂಡಿದ್ದರು. ಸಾಹೂ ಶನಿವಾರ ತಮ್ಮ ನಿವಾಸದಲ್ಲಿ ₹5 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ’ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಹೂ ಅವರ ನಿವಾಸದಿಂದ ಸಿಬಿಐ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.








