ಲವ್ – ಸೆಕ್ಸ್- ದೋಖಾ : 2 ಬಾರಿ ಅಬಾರ್ಷನ್ ಬಳಿಕ ಯುವತಿಗೆ ಕೈಕೊಟ್ಟ ಲೆಕ್ಚರರ್ ಮಗ..!
ಬೆಂಗಳೂರು: ಉಪನ್ಯಾಸಕಿ ಮಗನೋರ್ವ ವಿದ್ಯಾರ್ಥಿಯನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ನಿರಂತರ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ತಾನು ಓದುತ್ತಿದ್ದ ಕಾಲೇಜಿನ ಲೆಕ್ಚರರ್ ಮಗನ ಮಾತನ್ನ ನಂಬಿ ಮೋಸ ಹೋದ ವಿದ್ಯಾರ್ಥಿನಿ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ವಿದ್ಯಾರಣ್ಯಪುರ ಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾಳೆ. ಅಲ್ದೇ ಯುವತಿಯ ದೂರಿನ ಮೇರೆಗೆ ಆರೋಪಿ ಚಂದನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಚಂದನ್ ತಾಯಿ ನಗರದ ಕಾಲೇಜೊಂದರ ಲೆಕ್ಚರರ್. ಆ ಯುವತಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿ. 2018ರಲ್ಲಿ ಉಪನ್ಯಾಸಕಿಯನ್ನ ನೋಡಲು ವಿದ್ಯಾರ್ಥಿನಿ ಅವರ ಮನೆಗೆ ಹೋಗಿದ್ದಾಗ, ಅವರ ಮಗ ಚಂದನ್ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿತ್ತು.
ಕಿಡ್ನಾಪ್ ಆಗಿದ್ದ ವ್ಯಕ್ತಿಗೆ ಕ್ವಾರಂಟೈನ್ ನಿಯಮ ಉಲ್ಲಂಘನೆಯಡಿ ದಂಡ..!
ಈ ನಡುವೆ ಆರೋಪಿ ಚಂದನ್ ಮದುವೆಯಾಗುವುದಾಗಿ ನಂಬಿಸಿ ಚಂದನ್, ಯುವತಿ ಜತೆ ಮೂವರು ವರ್ಷಗಳಿಂದ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ. ಅಲ್ದೇ 2 ಬಾರಿ ಗರ್ಭಿಣಿಯಾದರೂ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದ. ಅಲ್ಲದೆ ಮದುವೆಗಾಗಿ 5-6ರಿಂದ ಲಕ್ಷ ಹಣವನ್ನೂ ಪಡೆದಿದ್ದ ಎನ್ನಲಾಗಿದೆ. ಇದೀಗ ಈತ ಮದುವೆ ಆಗುವುದಿಲ್ಲವೆಂದು ವಂಚಿಸಿದ್ದಾನೆ ಎಂದು ಯುವತಿ ದೂರಿದ್ದಾಳೆ. ಇತ್ತ ಚಂದನ್ ನನ್ನ ಅರೆಸ್ಟ್ ಮಾಡಿರುವ ಪೊಲೀಸರು ಆತನನ್ನ ವಿಚಾರಣೆಗೊಳಪಡಿಸಿದ್ದಾರೆ.
ಅಕ್ರಮ ಸಂಬಂಧ : ಮಹಿಳೆ , ತಾಯಿಯ ಕೊಲೆ : ಅಪ್ರಾಪ್ತೆಯ ಮೇಲೆ ಅತ್ಯಾಚಾರ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel