ಸ್ನೇಹ ನಿರಾಕರಿಸಿದ ಮಹಳಿಗೆ ಎಂಥಾ ಗತಿ ತಂದ ನೋಡಿ ಈ ಕಿರಾತಕ..!
ಮಹಾರಾಷ್ಟ್ರ: ಮಹಿಳೆಯೊಬ್ಬಳು ತನ್ನ ಸ್ನೇಹ ನಿರಾಕರಿಸಿದಳು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆಕೆಯ ಚಾರಿತ್ರ್ಯ ಹರಣ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್ನಲ್ಲಿ ನಡೆದಿದೆ. ಹೌದು ಆಕೆಯ ಭಿತ್ತಿ ಚಿತ್ರಗಳನ್ನ ಎಲ್ಲೆಡೆ ಹಂಚಿದ್ದಾನೆ. ಆ ಪೋಸ್ಟರ್ ನಲ್ಲಿ ಈ ಮಹಿಳೆ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ. ಪುರುಷರನ್ನು ಟಾರ್ಗೆಟ್ ಮಾಡುವುದೇ ಆಕೆಯ ಕೆಲಸ ಎಂದು ಭಿತ್ತಿಪತ್ರಗಳನ್ನು ಹಂಚುವ ಮೂಲಕ ಮಹಿಳೆಯ ಮಾನಹಾನಿ ಮಾಡುವ ಪ್ರಯತ್ನ ಮಾಡಿದ್ದಾನೆ. ಸದ್ಯ ಮನನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
10 ವರ್ಷದ ಬಾಲಕಿಯ ಸಾಧನೆಗೆ ನೀವೂ ಸಹ ನಿಬ್ಬೆರಗಾಗ್ತಿರಾ..! ವಿಡಿಯೋ ವೈರಲ್..!
ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ, ಈ ಮಹಿಳೆ ಸತಾರಾದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಮಹಿಳೆಗೆ ಸೆ.15ರಂದು 38 ವರ್ಷದ ಆರೋಪಿಯ ಜೊತೆ ಪರಿಚಯವಾಗಿತ್ತು. ಇದಾದ ಬಳಿಕ ಆತ ಮಹಿಳೆಗೆ ಪದೇಪದೆ ಕರೆ ಮಾಡುವುದು , ಮೆಸೇಜ್ ಮಾಡಲು ಆರಂಭಿಸಿದ್ದ. ಅಲ್ಲದೆ, ಬೇರೆ ಬೇರೆ ಹೋಟೆಲ್ಗಳಲ್ಲಿ ಭೇಟಿಯಾಗುವಂತೆ ಒತ್ತಾಯಿಸಿದ್ದ. ಆದರೆ, ಮಹಿಳೆ ಮಾತ್ರ ಇದ್ಯಾವುದಕ್ಕೂ ಒಪ್ಪಿರಲಿಲ್ಲ.
ಪ್ರೊಪೋಸ್ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಜೋಡಿ; ಮುಂದೇನಾಯ್ತ ನೋಡಿ..!
ಆತನ ಬಗ್ಗೆ ತಲೆ ಕೆಡಿಸಿಕೊಳ್ತಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಈತ ಕರಪತ್ರಗಳ ಮೂಲಕ ಚಾರಿತ್ಯ ಹರಣ ಮಾಡುವ ಕೆಟ್ಟ ಯೋಜನೆ ಹಾಕಿಕೊಂಡಿದ್ದ. ಆಕೆಯ ಚಾರಿತ್ರ್ಯ ಸರಿಯಿಲ್ಲ, ಆಕೆಯನ್ನು ಬಹಿಷ್ಕರಿಸಿ ಎಂದು ಬರೆದು ಸ್ಥಳೀಯವಾಗಿ ಹಂಚಿದ್ದಾನೆ. ಇದರಿಂದಾಗಿ ಮಹಿಳೆ ನಾನಾ ಕಷ್ಟಗಳನ್ನ ಅನುಭವಿಸಿದ್ದಾಳೆ. ಅನೇಕರಿಂದ ಮಾನಸಿಕ ಕಿರುಕುಳಕ್ಕೂ ಒಳಗಾಗಿದ್ದಾಳೆ. ಇತ್ತ ಬ್ಯುಸಿನೆಸ್ ಕೂಡ ಲಾಸ್ ಆಗಿದೆ. ಹೀಗಾಗಿ ಪೊಲೀಸರ ಬಳಿ ಸಹಾಯಕ್ಕೆ ತೆರಳಿದ್ದಾಳೆ. ಪೊಲೀಸರು ಸಹ ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ಧಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel