ಅಪ್ರಾಪ್ತೆ ಮೇಲೆ ಅತ್ಯಾಚಾರ – 18 ವರ್ಷದ ಕಾಮುಕನ ಬಂಧನ
ಮೇಘಾಲಯ : ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದ 18 ವರ್ಷದ ಕಾಮುಕನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಘಟನೆ ಮೇಗಾಲಯದ ಪಶ್ಚಿಮ ಕಾಶಿ ಗುಡ್ಡ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮಾಲ್ವಮ್ ರಾಮ್ ಕದ್ವಾಯತ್ ನ ಆಲ್ಬರ್ಟ್ ಲೈಂಗ್ ಖೋಯಿ ಬಂಧಿತ ಆರೋಪಿಯಾಗಿದ್ದಾನೆ. ಈತ ಏಪ್ರಿಲ್ 8 ರಂದು ಸಂತ್ರಸ್ತೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಪೊಲೀಸರ ಬಳಿ ಹೇಳದಂತೆ ಧಮ್ಕಿ ಹಾಕಿ ಪದೇ ಪದೇ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಸಂತ್ರಸ್ತೆಯ ತಂದೆ ಕಾಮುಕನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ.
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಾಧಾರಿತ ಸಿನಿಮಾ ‘ಮೇಜರ್’ ಟೀಸರ್ ಬಿಡುಗಡೆ
‘ಮಗನ ಕೊಂದ ಪಾಪಿ ಉಗ್ರರ ಕ್ಷಮಿಸಲು ಸಿದ್ಧ’..!