ಮಗಳು ದಾರಿ ತಪ್ಪಿದ್ದು ನಿಜ… ಆದ್ರೂ ಹೀಗೆ ಮಾಡೋಕೆ ಮನಸ್ಸು ಹೇಗೆ ಬಂತೋ ಈ ಮಹಾತಾಯಿಗೆ..!
ಒಡಿಶಾ: ತಾಯಿಯೊಬ್ಬಳು ತನ್ನ ಸ್ವಂತ ಮಗಳನ್ನೇ ಕೊಲೆ ಮಾಡಿಸಿ ಇದೀಗ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾಳೆ. 58 ವರ್ಷದ ತಾಯಿ ತನ್ನ ಮಗಳ ಕೊಲೆ ಮಾಡೋಕೆ 50000 ರೂಪಾಯಿ ಸುಪಾರಿ ಕೊಟ್ಟಿದ್ದಳು. ಪ್ರಮೋದ್ ಜೆನಾ ಎಂಬಾತ ಹಾಗೂ ಇನ್ನೂ ಇಬ್ಬರಿಗೆ ಈಕೆ ಸುಪಾರಿ ನೀಡಿದ್ದಳು ಎನ್ನಲಾಗಿದೆ. ಇದೀಗ ಆರೋಪಿ ಸುಕುರಿ ಜೊತೆಗೆ , ಮತ್ತೋರ್ವ ಆರೋಪಿ ಪ್ರಮೋದ್ ಜೆನಾನನ್ನೂ ಬಂಧಿಸಲಾಗಿದೆ.
ಮದುವೆ ಮಾಡಪ್ಪ… ಎಂದ ಮಗನನ್ನೇ ಕೊಂದ ತಂದೆ..!
ಈಕೆಯ ಕಿರಿಯ ಪುತ್ರಿ ಶಿವಾನಿ ನಾಯಕ್ (36) ಅಕ್ರಮ ಮದ್ಯ ವ್ಯಾಪಾರದಲ್ಲಿ ಭಾಗಿಯಾದ್ದಳು. ಇದೇ ವಿಚಾರವಾಗಿ ಇವರ ಕುಟುಂಬದಲ್ಲಿ ವೈಮನಸ್ಯ ಮೂಡಿತ್ತು ಎನ್ನಲಾಗಿದೆ. ತನ್ನ ಮಗಳನ್ನ ಅಕ್ರಮ ಮದ್ಯ ವ್ಯಾಪಾರ ಮಾಡದಂತೆ ತಡೆಯಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಶಿವಾನಿಯನ್ನ ಕೊಲೆ ಮಾಡಿಸಲು ನಿರ್ಧಾರ ಮಾಡಿದ್ದಳು. ಇದಕ್ಕಾಗಿ 50000 ರೂಪಾಯಿ ಸುಪಾರಿ ನೀಡಲು ಒಪ್ಪಿದಳು ಎನ್ನಲಾಗಿದೆ. ಕೊಲೆ ಮಾಡಲು ಮುಂಗಡವಾಗಿ 8 ಸಾವಿರ ರೂಪಾಯಿಯನ್ನೂ ನೀಡಿದ್ದಳು.
video : ಹೆಡ್ ಫೋನ್ ಗುಂಗಲ್ಲಿದ್ದ ಮಹಿಳೆ ಮೇಲೆ ಹರಿದ ರೈಲು
ಅದರಂತೆ ಶಿವಾನಿಯನ್ನ ಜನವರಿ 12ರಂದು ಕಲ್ಲು ಹಾಗೂ ಇತರೆ ಮಾರಕಾಸ್ತ್ರಗಳನ್ನ ಬಳಸಿ ಕೊಲೆ ಮಾಡಲಾಗಿದೆ. ಇದೀಗ ಪ್ರಕರಣದ ತನಿಖೆಯ ನಂತರ ತಾಯಿ ಸುಕುರಿ ಆಗೂ ಪ್ರಮೋದ್ ನನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 26 ರಿಂದ ಮಸೀದಿ ನಿರ್ಮಾಣ ಪ್ರಾರಂಭ
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ವೈಸ್ ಚೇರ್ ಮನ್ ಗೆ 2 ವರ್ಷ ಜೈಲು : ಶಿಕ್ಷೆಯಾಗಿದ್ದೇಕೆ .!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








