Crime : ಗಂಡನಿಗಾಗಿ ನವಜಾತ ಶಿಶು ಬಿಟ್ಟು ಹೋಗಿದ್ದ ತಾಯಿ , ಮತ್ತೆ ವಾಪಸ್ ಬಂದಳು…
ತಮಿಳುನಾಡು : 3ನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ತಾಯಿಯೊಬ್ಬಳು ತನ್ನ ಪತಿಯ ಭಯಕ್ಕೆ ನವಜಾತ ಶಿಶುವನ್ನು ಆಸ್ಪತ್ರೆಯ ಹೊರಗೆ ಬಿಟ್ಟು ಹೋಗಿದ್ದಳು.. ಆದ್ರೀಗ ಪಶ್ಚಾತಾಪ ಪಟ್ಟು ವಾಪಸ್ಸಾಗಿ ತನ್ನ ಮಗುವನ್ನಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.. ಇಂತಹದೊಂದು ಘಟನೆ ನಡೆದಿರುವುದು ತಮಿಳು ನಾಡಿನ ತಿರುಚ್ಚಿಯಲ್ಲಿ…
25 ವರ್ಷದ ಮಹಿಳೆ ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಗಂಡ ಧಮ್ಕಿ ಹಾಕಿದ್ದ ನಂತರ ಬೆದರಿದ್ದ ಮಹಿಳೆ ಮಗುವನ್ನು ತಿರುಚ್ಚಿಯ ಆಸ್ಪತ್ರೆಯೊಂದರ ಹೊರಗೆ ಬಿಟ್ಟು ಹೋಗಿದ್ದಳು. ಆದರೆ ಕೆಲವು ಕಟ್ಟಡ ಕಾರ್ಮಿಕರು ಮಗುವನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
Bollywood : ಸೌತ್ ಇಂಡಿಯನ್ ಸ್ಟೈನ್ ನಲ್ಲಿ ಮದುವೆಯಾದ ಮೌನಿ..!!!
ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಗುವನ್ನು ವಶಪಡಿಸಿಕೊಂಡು ತಿರುಚ್ಚಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ಅಲ್ಲದೇ ಮಗುವಿನ ಪೋಷಕರನ್ನು ಹುಡುಕಲು ಆರಂಭಿಸಿದ್ದರು.
ಇದಾದ ದು ದಿನದ ನಂತರ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಮಗು ತನ್ನದೆಂದು ತಿಳಿಸಿದ್ದಾಳೆ. ಮಗುವನ್ನು ತಾನೇ ಬಿಟ್ಟುಹೋಗಿದ್ದು, ನಂತರ ಮಗುವನ್ನು ಮರಳಿ ಪಡೆಯಲು ಹೋದಾಗ ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿದರು ಎಂದು ಹೇಳಿದ್ದಾಳೆ.
ಅಲ್ಲದೇ ಮಹಿಳೆಯು ತನ್ನ ಪತಿಯ ಒತ್ತಡದಿಂದ ಈ ನಿರ್ಧಾರ ಕೈಗೊಂಡಿದ್ದಾಗಿಯೂ ತಿಳಿಸಿದ್ದಾಳೆ.. ಸದ್ಯ ಮಗುವಿಗೆ ಇನ್ನೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
crime – mother left her new born baby and cane back in regret








