ಪತ್ನಿಯನ್ನ ಗಂಡನ ಮನೆಗೆ ಕಳುಹಿಸದಕ್ಕೆ ಅತ್ತೆ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿದ ಅಳಿಯ
ಹುಬ್ಬಳ್ಳಿ : ಪತ್ನಿಯನ್ನು 4 ವರ್ಷಗಳ ಕಾಲ ತವರು ಮನೆಗೆ ಕಳುಹಿಸದ ಅತ್ತೆಗೆ ಅಳಿಯ ಬ್ಲೇಡ್ ನಿಂದ ಹಲ್ಲೆ ಮಾಡಿದ ಘಟನೆಯು ಹುಬ್ಬಳ್ಳಿಯಲ್ಲಿ ನಡೆದಿದೆ.. ನಾಲ್ಕು ವರ್ಷಗಳಿಂದ ತವರು ಮನೆ ಸೇರಿರುವ ಹೆಂಡತಿಯನ್ನು ವಾಪಸ್ ಕಳುಹಿಸಲಿಲ್ಲ ಎಂಬ ಆಕ್ರೋಶದಿಂದ ಅತ್ತೆಗೆ ಬ್ಲೇಡ್ ನಿಂದ ಹಲ್ಲೆ ಮಾಡಿದ್ದಾನೆ.
ಹುಬ್ಬಳ್ಳಿಯ ನವನಗರದ ನಿವಾಸಿ ಸೋಮವ್ವ ಮಲ್ಲಾಡ ಮೇಲೆ ಆಕೆಯ ಪತಿಯ ಗಂಡ ( ಅಳಿಯ) ಪಡದಯ್ಯನ ಹಕ್ಕಲದ ರಮೇಶ ದೊಡ್ಡಮನಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದವರ ಮಗಳು 5 ವರ್ಷಗಳ ಹಿಂದೆ ಪತಿ ರಮೇಶ್ ಜೊತೆ ಜಗಳವಾಡಿ ತವರು ಸೇರಿದ್ದಳು.. ಅಂದಿನಿಂದ ಆಕೆಯ ತಾಯಿ ಆಕೆಯನ್ನ ವಾಪಸ್ ಕಳುಹಿಸಿರಲಿಲ್ಲ..
ಡಿಸೆಂಬರ್ 7 ರಂದು ಪತ್ನಿ ಜೊತೆ ರಮೇಶ್ ಜಗಳ ತೆಗೆದು ಹಲ್ಲೆ ನಡೆಸಿದ್ದನು. ಈ ವೇಳೆ ಬಿಡಿಸಲು ಮುಂದಾಗಿದ್ದ ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಲೇಡ್ ನಿಂದ ಹಲ್ಲೆ ಮಾಡಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







