ಕೇವಲ 20 ರೂಪಾಯಿಗೆ ನಡೆದ ಹೋಯ್ತು ಬೀದಿ ವ್ಯಾಪಾರಿಯ ಕೊಲೆ..!
ಮುಂಬೈ: ಕೇವಲ 20 ರೂಪಾಯಿಯ ಇಡ್ಲಿ ರಸ್ತೆ ಬದಿಯ ವ್ಯಾಪಾರಿಯನ್ನ ಮೂವರು ದುಷ್ಕರ್ಮಿಗಳು ಕೊಲೆ ಮಾಡಿರುವ ದಾರಣ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. 26 ವರ್ಷದ ವೀರೇಂದ್ರ ಯಾದವ್ ಕೊಲೆಯಾದ ಯುವಕನಾಗಿದ್ದಾನೆ. ವೀರೆಂದ್ರ ಯಾದವ್ ಇಲ್ಲಿನ ಮೀರಾ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಇಡ್ಲಿ ಉಪಹಾರದ ವ್ಯಾಪಾರ ಮಾಡುತ್ತಿದ್ದ. ಶುಕ್ರವಾರ ಬೆಳಗ್ಗೆ ಆತನ ಗಾಡಿಯ ಬಳಿ ಮೂವರು ತಿಂಡಿ ತಿನ್ನಲೆಂದು ಬಂದಿದ್ದರು. ಆಗ ಅವರಿಗೆ ನೀವು ನನಗೆ 20 ರೂಪಾಯಿ ಬಾಕಿ ಕೊಡುವುದಿದೆ ಎಂದು ವೀರೇಂದ್ರ ನೆನಪಿಸಿದ್ದಾನೆ. ಇದೇ ಕಾರಣಕ್ಕೆ ಜಗಳ ಆರಂಭವಾಗಿದೆ.
ಕೊರೊನಾ ಸಂದರ್ಭದಲ್ಲಿ ಕಡಿಮೆಯಾಗಿಲ್ಲ ರಣವೀರ್ ಬ್ರ್ಯಾಂಡ್ ವಾಲ್ಯೂ : ಗಳಿಸಿದ್ದೆಷ್ಟು ಗೊತ್ತಾ..!
ಮಾತುಕತೆ ಹೆಚ್ಚಾಗಿ ಕೈಕೈ ಮಿಲಾಯಿಸಲಾಗಿದೆ. ಈ ವೇಳೆ ಒಬ್ಬಾತ ವಿರೇಂದ್ರ ಯಾದವ್ ನನ್ನು ತಳ್ಳಿದ್ದಾನೆ. ಆ ರಭಸಕ್ಕೆ ಕಲ್ಲಿನ ಮೇಲೆ ಬಿದ್ದ ವೀರೆಂದ್ರ ನ ತಲೆಗೆ ಗಾಯವಾಗಿತ್ತು. ಘಟನೆ ಬಳಿಕ ಸ್ಥಳೀಯರು ಕೂಡಲೇ ಆತನನ್ನ ಆಸ್ಪತ್ರೆಗೆ ರವಾನೆ ಮಾಡಿದರೂ. ಆದ್ರೂ ದುರಾದೃಷ್ಟವಸಾತ್ ಯುವಕ ಅಷ್ರಲ್ಲಾಗ್ಲೇ ಮೃತಪಟ್ಟಿದ್ದ ಎನ್ನಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮೂವರು ವ್ಯಕ್ತಿಗಳ ವಿರುದ್ಧ ನಯಾ ನಗರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕಂಗನಾ ರಣಾವತ್ ಧಾಕಡ್ ಸಿನಿಮಾದ ಬಜೆಟ್ ಎಷ್ಟು ಗೊತ್ತಾ..!
ಲಾರಿಯನ್ನ ಓವರ್ ಟೇಕ್ ಮಾಡಿದ್ದಕ್ಕೆ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








