ADVERTISEMENT
Wednesday, March 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

ಇತ್ತೀಚೆಗಿನ ಅಪರಾಧ ಪ್ರಕರಣಗಳು : CRIME NEWS

Namratha Rao by Namratha Rao
February 15, 2021
in Crime, Newsbeat, ಅಪರಾಧ
cyber crime volunteers
Share on FacebookShare on TwitterShare on WhatsappShare on Telegram

ಇತ್ತೀಚೆಗಿನ ಅಪರಾಧ ಪ್ರಕರಣಗಳು : CRIME NEWS

16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಟೆರೆಸ್ ನಿಂದ ಕೆಳಗೆಸೆದ ಕಾಮುಕರು

ಉತ್ತರಪ್ರದೇಶ: ಉತ್ತರಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಯಾವ ಮಟ್ಟಿಗಿದೆ ಎಂಬುದನ್ನ ಯೋಚನೆ ಮಾಡೋದು ಅನಿವಾರ್ಯವಾಗಿದೆ ಅನ್ನುವಷ್ಟರ ಮಟ್ಟಿಗೆ ಅಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ದಿನೇ ದಿನೇ ಮಹಿಳೆಯರು, ಬಾಲಕಿಯರು, ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ , ಸಾಮೂಹಿಕ ಅತ್ಯಾಚಾರದಂತಹ ಹೇಯ ಕೃತ್ಯಗಳು ನಡೆಯುತ್ತಲೇ ಇವೆ. ಆದ್ರೂ ಸರ್ಕಾರ ಯಾಕೆ ಸೂಕ್ತ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಕ್ರಮ ಕೈಗೊಳ್ತಿದ್ರೂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದಕ್ಕೆ ಕಾರಣವೇನು ಎನ್ನುವಷ್ಟರ ಮಟ್ಟಿಗೆ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.

ಮತ್ತೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಕಾಮುಕ ಯುವಕರು 16 ವರ್ಷದ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ವೇಳೆ ಸ್ಥಳಕ್ಕೆ ಹುಡುಗಿಯ ತಂದೆ ಬರುವುದನ್ನು ಗಮನಿಸಿ ಟೆರೆಸ್ ನಿಂದ ಬಾಲಕಿಯನ್ನು ಕೆಳಗೆ ನೂಕಿದ್ದಾರೆ.

Related posts

ಕೆಡಿ ಚಿತ್ರತಂಡಕ್ಕೆ ಬಿಗ್ ಶಾಕ್: ಅಶ್ಲೀಲತೆಯ ಆರೋಪದಡಿ ನೋರಾ-ಧ್ರುವ ಹೆಜ್ಜೆ ಹಾಕಿದ ಸರ್ಕೆ ಚುನರ್ ಹಾಡು ನಿಷೇಧಕ್ಕೆ ಮುಂದಾದ ಕೇಂದ್ರ ಸರ್ಕಾರ!

ಕೆಡಿ ಚಿತ್ರತಂಡಕ್ಕೆ ಬಿಗ್ ಶಾಕ್: ಅಶ್ಲೀಲತೆಯ ಆರೋಪದಡಿ ನೋರಾ-ಧ್ರುವ ಹೆಜ್ಜೆ ಹಾಕಿದ ಸರ್ಕೆ ಚುನರ್ ಹಾಡು ನಿಷೇಧಕ್ಕೆ ಮುಂದಾದ ಕೇಂದ್ರ ಸರ್ಕಾರ!

March 18, 2026
ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

March 18, 2026

ಇದರಿಂದಾಗಿ ಬಾಲಕಿಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯನ್ನು ಅಪಹರಿಸಿದ್ದ ಆರೋಪಿಗಳು ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದೇ ವೇಳೆ ಆಕೆಯ ತಂದೆ ಅಲ್ಲಿಗೆ ಆಗಮಿಸಿದಾಗ ಕಟ್ಟಡದಿಂದ ಕೆಲಗೆ ತಳ್ಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಜ್ಞೆ ಮರಳಿದ ನಂತರ ಬಾಲಕಿ ಪೋಷಕರಿಗೆ ನಡೆದ ವಿಷಯವನ್ನು ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಲಾಗಿದೆ.

ಭಾವೀ ಪತಿ ಜೊತೆ ಸೇರಿ ಬಾಯ್ ಫ್ರೆಂಡ್ ಒಂದು ಗತಿ ಕಾಣಿಸಿದ ಖತರ್ನಾಕ್ ಲೇಡಿ..!

ಉತ್ತರಪ್ರದೇಶ:  ಮಹಿಳೆಯೊಬ್ಬಳು ತನ್ನ ಭಾವೀ ಪತಿಯ ಸಹಾಯ ಪಡೆದು ಮಾಜಿ ಪ್ರಿಯಕರನ ಹತ್ಯೆಗೆ ಸ್ಕೆಚ್ ಹಾಕಿ, ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 26 ವರ್ಷದ ಯುವಕ ನಿತಿನ್​ ಚೌಧರಿ ಹತ್ಯೆಗೀಡಾಗಿದ್ದಾನೆ. ಈತ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಲೇ ಇದ್ದ. ಆದರೆ ಮಹಿಳೆಗೆ ಆಗಲೇ ಬೇರೊಬ್ಬನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಭಾವೀ ಪತಿಯ ಮನವೊಲಿಸಿ ಹಳೇ ಬಾಯ್ ಫ್ರೆಂಡ್ ಕೊಲೆಗೆ ಇಬ್ಬರೂ ಸೇರಿ ಸ್ಕೆಚ್ ಹಾಕಿದ್ದಾರೆ.ಪ್ಲಾನ್​ ಪ್ರಕಾರ ಯುವತಿ ಹಾಗೂ ಆಕೆಯ ಭಾವಿ ಪತಿ ಸನ್ನಿ ನಿತಿನ್​ನ್ನು ಪಾರ್ಟಿಯೊಂದಕ್ಕೆ ಆಹ್ವಾನಿಸಿದ್ದಾರೆ. ಆತನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಬಳಿಕ ಆತನನ್ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ 56 ವರ್ಷದ ಆರೋಪಿ ವಿನೋದ್​ ಕುಮಾರ್​ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿ ಮಹಿಳೆ ಹಾಗೂ ಆತನ ಭಾವಿ ಪತಿ ನಾಪತ್ತೆಯಾಗಿದ್ದರು. ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಅವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆತ್ಮ ಸಂತೋಷಕ್ಕಾಗಿ ಹುಡುಗಿಯರ ಅಶ್ಲೀಲ ವಿಡಿಯೋ ಪಡೆಯುತ್ತಿದ್ದ ಅಪ್ರಾಪ್ತ ಬಾಲಕ..!

ಹೇಗೆಲ್ಲಾ ಮೊಬೈಲ್ ನಲ್ಲಿ ನೆಗೆಟಿವ್ ಕೆಲಸಗಳಿಗೆ ಬಳಿಸಿಕೊಳ್ಳಬಹುದು. ಹೇಗೆಲ್ಲಾ ದಾರಿ ತಪ್ಪಬಹುದು. ಬೇಕಾಗಿರೋದನ್ನ ಬಿಟ್ಟು ಬೇರೆಯದನ್ನೇ ತಲೆಗಚ್ಚಿಕೊಂಡು, ಅದ್ರಿಂದ ಕ್ರೈಂ ಕೂಡ ಮಾಡಬಹುದು. ಟೆಕ್ನಾಲಜಿ ಅಂತರ್ಜಾಲ ದುರುಪಯೋಜ ಮಾಡಿಕೊಳ್ಳಬಹುದು ಅನ್ನೋದಕ್ಕೆ ಉದಾಹರಣೆ ನಾವೀಗಾಗ್ಲೇ ಅನೇಕ ಪ್ರಕರಣಗಳನ್ನ ನೋಡಿದ್ದೇವೆ. ಆದ್ರೆ ಹರಿಯಾಣದ ಈ ಬಾಲಕನ ನಿಜಕ್ಕೂ ಎಂಥವರನ್ನೂ ದಿಗ್ಭ್ರಾಂತರನ್ನಾಗಿಸುತ್ತೆ.

ಆನ್ ಲೈನ್ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಪ್ರಾಪ್ತ ಬಾಲಕನ ಬೆಚ್ಚಿಬೀಳಿಸುವ ಅಸಲಿಯತ್ತು ಬಯಲಾಗಿದ್ದು, ಪೊಲೀಸರನ್ನೇ ತಬ್ಬಿಬ್ಬುಗೊಳಿಸಿದೆ. ಸೈಬರ್ ಸೆಲ್ ತಂಡವು ಅಪ್ರಾಪ್ತನೊಬ್ಬನನ್ನು ಬಂಧಿಸಿದೆ. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆ ಬಾಲಕನ ಅಸಲಿಯತ್ತು ಬೆಳಕಿಗೆ ಬಂದಿದೆ.

ಈ ಬಾಲಕ ತನ್ನ ಇನ್ ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಸುಂದರ ಹುಡುಗಿಯರ ಫೋಟೋಗಳನ್ನು ಡೌನ್ಲೋಡ್ ಮಾಡಿಕೊಂಡು ಅಶ್ಲೀಲ ಆಪ್ ಮೂಲಕ ಅವರ ಫೋಟೋಗೆ ನಗ್ನವಿರುವ ಫೋಟೋ ಸೇರಿಸಿ ವಿರೂಪಗೊಳಿಸುತ್ತಿದ್ದನು. ಬಳಿಕ ತನ್ನ ಇನ್ ಸ್ಟಾಗ್ರಾಂ ಡಿಪಿಗೆ ಹುಡುಗಿ ಫೋಟೋ ಹಾಕಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಪರಿಚಯ ಬೆಳೆದ ಬಳಿಕ ಅಶ್ಲೀಲವಾಗಿ ಕ್ರಿಯೇಟ್ ಮಾಡಿದ ಅವರ ಫೋಟೋಗಳನ್ನು ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ಕರಾಳ ಸತ್ಯ ಬಯಲಾಗಿದೆ.

ಇನ್ನೂ ಕಿರಿಯ ವಯಸ್ಸಿನ ಹುಡುಗಿಯರು ( ಅಪ್ರಾಪ್ತೆಯರು) ಈತನ ಟಾರ್ಗೆಟ್. ಹೀಗೆ ಬ್ಲಾಕ್ ಮೇಲೆ ಮಾಡಿ ಹುಡುಗಿಯರಿಗೆ ಬಾತ್ ರೂಂಗೆ ತೆರಳಿ ನಗ್ನವಾಗಿರುವ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಹೇಳುತ್ತಿದ್ದ. ಇಲ್ಲವಾದಲ್ಲಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಬೆದರಿದ ಎಷ್ಟೋ ಹುಡುಗಿಯರು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಆತನಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಸಂಬಂಧ ಆನ್ಲೈನ್ ವಂಚನೆ ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ ಹಿನ್ನೆಲೆ ಆರ್ ಕೆ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ನೈಋತ್ಯ ಜಿಲ್ಲೆಯ ಹೆಚ್ಚುವರಿ ಡಿಸಿಪಿ ಅಮಿತ್ ಗೋಯಲ್ ಪ್ರತಾಪ್ ಸೈಬರ್ ಸೆಲ್ ಇನ್ಸ್ಪೆಕ್ಟರ್ ರಾಮನ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತಂಡವನ್ನು ರಚಿಸಿ ಆರೋಪಿ ಪತ್ತೆಗೆ ಜಾಲ ಬೀಸಿ, ಬಳಿಕ ಬಾಲಕನನ್ನ ಅರೆಸ್ಟ್ ಮಾಡಿದ್ದಾರೆ.

ಮಂಗಳೂರು : ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ, ಮೂವರು ಅರೆಸ್ಟ್

ಮಂಗಳೂರು : ಲಾಲ್ ಬಾಗ್ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನನ್ನು ಗಾಯಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಉರ್ವ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಅಪ್ರಾಪ್ತನು ಸೇರಿದ್ದಾನೆ.

ಬಂಧಿತರನ್ನು ಕುದ್ರೋಳಿ ನಿವಾಸಿಗಳಾದ ಮುಹಮ್ಮದ್ ಫಾಯಿಕ್ (18), ಮುಹಮದ್ ಸಾಹಿಲ್ (19) ಎಂದು ಗುರುತಿಸಲಾಗಿದೆ.

ನಗರದ ಲಾಲ್ ಬಾಗ್ ಬಳಿ ಫೆಬ್ರವರಿ 7ರಂದು ರಾತ್ರಿ ದೀಪಕ್ ಕುಮಾರ್ ಎಂಬ ಯುವಕನಿಗೆ ಬೈಕ್ ನಲ್ಲಿ ಬಂದ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು.

ಈ ಸಂಬಂಧ ಉರ್ವ ಪೆÇಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Tags: Crimecyber crimefraudMurderpoliceRape
ShareTweetSendShare
Join us on:

Related Posts

ಕೆಡಿ ಚಿತ್ರತಂಡಕ್ಕೆ ಬಿಗ್ ಶಾಕ್: ಅಶ್ಲೀಲತೆಯ ಆರೋಪದಡಿ ನೋರಾ-ಧ್ರುವ ಹೆಜ್ಜೆ ಹಾಕಿದ ಸರ್ಕೆ ಚುನರ್ ಹಾಡು ನಿಷೇಧಕ್ಕೆ ಮುಂದಾದ ಕೇಂದ್ರ ಸರ್ಕಾರ!

ಕೆಡಿ ಚಿತ್ರತಂಡಕ್ಕೆ ಬಿಗ್ ಶಾಕ್: ಅಶ್ಲೀಲತೆಯ ಆರೋಪದಡಿ ನೋರಾ-ಧ್ರುವ ಹೆಜ್ಜೆ ಹಾಕಿದ ಸರ್ಕೆ ಚುನರ್ ಹಾಡು ನಿಷೇಧಕ್ಕೆ ಮುಂದಾದ ಕೇಂದ್ರ ಸರ್ಕಾರ!

by Shwetha
March 18, 2026
0

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ: ದಿ ಡೆವಿಲ್ ಚಿತ್ರತಂಡಕ್ಕೆ ಭಾರಿ ಆಘಾತ ಎದುರಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮತ್ತು ಶೋ ಮ್ಯಾನ್...

ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ.. ಪರೀಕ್ಷೆಗಳು ಮುಂದೂಡಿಕೆ

by Shwetha
March 18, 2026
0

ನೈರುತ್ಯ ರೈಲ್ವೆ ನಡೆಸುತ್ತಿದ್ದ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದ ಹಿನ್ನೆಲೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ...

ಬಡವರನ್ನು ದಂಡಿಸಬೇಡಿ: ಮಿನಿಮಮ್ ಬ್ಯಾಲೆನ್ಸ್ ದಂಡಕ್ಕೆ MP ರಾಘವ್ ಚಡ್ಡಾ ಆಕ್ರೋಶ

ಬಡವರನ್ನು ದಂಡಿಸಬೇಡಿ: ಮಿನಿಮಮ್ ಬ್ಯಾಲೆನ್ಸ್ ದಂಡಕ್ಕೆ MP ರಾಘವ್ ಚಡ್ಡಾ ಆಕ್ರೋಶ

by Shwetha
March 18, 2026
0

ರಾಘವ್ ಚಡ್ಡಾ ಸಂಸತ್ತಿನಲ್ಲಿ ಬ್ಯಾಂಕುಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ಬ್ಯಾಂಕುಗಳು ₹19 ಸಾವಿರ ಕೋಟಿ ದಂಡ ವಸೂಲಿ ಮಾಡಿರುವುದು...

ಡಿನ್ನರ್ ಮೀಟಿಂಗ್ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಿ : ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ;ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ಡಿನ್ನರ್ ಮೀಟಿಂಗ್ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಿ : ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ;ಸಿಎಂ ವಿರುದ್ಧ ಆರ್ ಅಶೋಕ್ ವಾಗ್ದಾಳಿ

by Shwetha
March 18, 2026
0

ಬೆಂಗಳೂರು: ರಾಜ್ಯದ ಖಜಾನೆಯನ್ನು ಖಾಲಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ನಯಾಪೈಸೆ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರ, ಇದೀಗ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನೂ ಸಕಾಲಕ್ಕೆ ಬಳಸಿಕೊಳ್ಳಲಾಗದೆ...

ಇದೊಂದು ಡೈಲಿ ವೇಜ್ ಸರ್ಕಾರ ನಿವೃತ್ತ ಅಧಿಕಾರಿಗಳ ಪತ್ನಿಯರೇ ಇಲ್ಲಿ ಗುತ್ತಿಗೆದಾರರು ಎಂದು ಬಾಂಬ್ ಸಿಡಿಸಿದ ಹಳ್ಳಿಹಕ್ಕಿ

ಇದೊಂದು ಡೈಲಿ ವೇಜ್ ಸರ್ಕಾರ ನಿವೃತ್ತ ಅಧಿಕಾರಿಗಳ ಪತ್ನಿಯರೇ ಇಲ್ಲಿ ಗುತ್ತಿಗೆದಾರರು ಎಂದು ಬಾಂಬ್ ಸಿಡಿಸಿದ ಹಳ್ಳಿಹಕ್ಕಿ

by Shwetha
March 18, 2026
0

ಬೆಂಗಳೂರು: ರಾಜ್ಯದಲ್ಲಿ ಬಿಯರ್ ಬೆಲೆಯನ್ನು ವಿಪರೀತವಾಗಿ ಏರಿಕೆ ಮಾಡಿರುವುದರಿಂದ ಯುವಜನತೆ ಮತ್ತು ಮಕ್ಕಳು ಅಗ್ಗದ ಅಮಲು ಪದಾರ್ಥವಾದ ಗಾಂಜಾ ಮೊರೆ ಹೋಗುತ್ತಿದ್ದಾರೆ ಎಂದು ಹಿರಿಯ ವಿಧಾನಪರಿಷತ್ ಸದಸ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram