ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಲ್ಲ ಎಂದ ತಂಗಿಯನ್ನ ಕೊಂದ ಪಾಪಿ ಅಕ್ಕ..!
ಜಾರ್ಖಂಡ್ : ಅಪ್ರಾಪ್ತ ತಂಗಿ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಲು ಒಪ್ಪದಕ್ಕೆ ಆಕೆಯನ್ನ ಸ್ವಂತ ಅಕ್ಕ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ನಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಈ ಕುಕೃತ್ಯದಲ್ಲಿ ಇನ್ನೂ ನಾಲ್ವರು ಕೈ ಜೋಡಿಸಿದ್ದಾರೆ. ಸಹೋದರಿ (30) ರಾಖಿ ದೇವಿ, (25) ರೂಪಾ ದೇವಿ, (30) ಭಾವ ಧನಂಜಯ ಅಗರ್ ವಾಲ್ , ರಾಖಿ ದೇವಿ ಪ್ರಿಯತಮರಾದ ಪ್ರತಾಪ್ ಕುಮಾರ್ ಸಿಂಗ್ ಹಾಗೂ ನಿತೀಶ್ ಕೊಲೆ ಮಾಡಿದ್ದು, ಆಕೆ ಕಾಣೆಯಾಗಿರೋ ನಾಟಕವಾಡಿ , ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 17 ವರ್ಷದ ಅಪ್ರಾಪ್ತೆ ಸುಮಾರು 7 ತಿಂಗಳುಗಳ ಹಿಂದೆ ಕಾಣೆಯಾಗಿದ್ದಳು. ಇತ್ತೀಚೆಗೆ ಆಕೆಯ ಮೃತದೇಹವು ಝಾರ್ಖಂಡ್ ನ ಸೋನಾರ್ ಅಣೆಕಟ್ಟು ಬಳಿ ಪತ್ತೆಯಾಗಿತ್ತು. ಮ್ಯಾಜಿಸ್ಟ್ರೇಟರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರ ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿದ್ದಾಗಿ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೊಲೆಯಾದ ಅಪ್ರಾಪ್ತೆಯ ಸಹೋದರಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಸತ್ಯ ಬಾಯ್ಬಿಟ್ಟಿದ್ದಾರೆ. ಅಪ್ರಾಪ್ತೆಯ ತಂದೆ ತಾಯಿ ಮೃತಪಟ್ಟಿದ್ದು, ಆಕೆಗೆ ನಾಲ್ವರು ಸಹೋದರಿಯರಿದ್ದರು. ಈಕೆ ಸಹೋದದರಿಯರ ಪೈಕಿ 2ನೇಯವಳು. ಈಕೆ ತನ್ನ ಅಕ್ಕ ರಾಖಿಯೊಂದಿಗೆ ಸುದ್ನಾ ಬಳಿ ವಾಸವಾಗಿದ್ದಳು. ಅಕ್ಕ ರಾಖಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದಳು. ಸಹೋದರಿ ರಾಖಿ ಮತ್ತು ಧನಂಜಯ ಇಬ್ಬರೂ ಅಪ್ರಾಪ್ತೆಯನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಆದರೆ ಅದಕ್ಕೆ ಅಪ್ರಾಪ್ತ ಸಹೋದರಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಆಕೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದು ಆತನನ್ನೇ ವಿವಾಹವಾಗಲು ನಿರ್ಧರಿಸಿದ್ದಳು ಎನ್ನಲಾಗಿದೆ. ಅದನ್ನು ಅಕ್ಕ ರಾಖಿ ವಿರೋಧಿಸಿದ್ದಾಳೆ.
ಈ ವೇಳೆ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಲು ರಾಖಿಯ ಪ್ರಿಯತಮರಾದ ಪ್ರತಾಪ್, ನಿತೀಶ್ ಆಗಾಗ ಮನೆಗೆ ಬರುತ್ತಿದ್ದರು ಎನ್ನಲಾಗಿದೆ. ಅದಕ್ಕೆ ರಾಖಿಯೂ ಸಹಾಯ ಮಾಡುತ್ತಿದ್ದಳು. ಆದ್ರೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದಿದ್ದಕ್ಕೆ ಅಪ್ರಾಪ್ತೆಯನ್ನು ಸಹೋದರಿ ರಾಖಿ ಕೊಲೆಗೈದು ನೇಣಿಗೆ ಹಾಕಿದ್ದಾಳೆ. ನಂತರ ಧನಂಜಯ ಮತ್ತು ರೂಪಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಧನಂಜಯ್ ಆಟೊ-ರಿಕ್ಷಾದೊಂದಿಗೆ ಬಂದಿದ್ದಾನೆ. ಕೊನೆಗೆ ಐವರೂ ಆರೋಪಿಗಳು ಸೇರಿಕೊಂಡು ಮೃತದೇಹವನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖತರ್ನಾಕ್ ಕಪಲ್ ನಿಂದ ಹನಿಟ್ರ್ಯಾಪ್ – 30 ಮಹಿಳೆಯರಿಂದ 300 ಮಂದಿಯಿಂದ ಕೋಟಿ ಕೋಟಿ ಸುಲಿಗೆ..!








