Crime : ದೆವ್ವ ಬಿಡಿಸುವ ನೆಪದಲ್ಲಿ 14 ರ ಬಾಲಕಿಯ ಮೇಲೆ ಮಂತ್ರವಾದಿಯಿಂದ ಅತ್ಯಾಚಾರ
ಉತ್ತರಪ್ರದೇಶ : ಮಂತ್ರವಾದಿಯೋರ್ವ ಬಾಲಕಿಗೆ ದೆವ್ವ ಹಿಡಿದಿದೆ , ದೆವ್ವ ಬಿಡಿಸುವೆ ಎಂಬ ನೆಪ ಹೇಳಿ 14 ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ..
ಅಶೋಕ್ ಕುಮಾರ್ (45) ಬಂಧಿತ ಆರೋಪಿಯಾಗಿದ್ದಾನೆ..
ಬಾಲಕಿ ಕಳೆದ ಮೂರು ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಬಾಲಕಿಯ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಬಳಿಗೆ ಬಂದ ಮಂತ್ರವಾದಿ ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಇದರಿಂದಾಗಿ ಪದೇ ಪದೇ ಪ್ರಜ್ಞೆ ತಪ್ಪಿ ಬೀಳುತ್ತಿದ್ದಾಳೆ. ಈ ಹಿನ್ನೆಲೆಯಲ್ಲಿ ತನ್ನ ಬಳಿಗೆ ಕಳುಹಿಸಿಕೊಡಿ, ನಾನು ಆ ರೋಗವನ್ನು ಸರಿಪಡಿಸುತ್ತೇನೆ ಎಂದು ನಂಬಿಸಿದ್ದಾನೆ. ಆತನ ಮಾತಿಗೆ ಮರುಳಾಗಿ ಮಗಳನ್ನ ಕಳುಹಿಸಿದ್ದಾರೆ..
ಇದಾದ ಬಳಿಕ ಅಶೋಕ್ ಕುಮಾರ್ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಘಟನೆಗೆ ಸಂಬಂಧಿಸಿ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಕ್ಸೋ ಕಾಯ್ದೆಯಡಿಯಯಲ್ಲಿ ಮಂತ್ರವಾದಿಯನ್ನ ಬಂಧಿಸಿದ್ದಾರೆ..