ತಾಯಿ ಜೊತೆಗೂಡಿ , ಅಕ್ಕನ ತಲೆ ಕಡಿದು, ಸೆಲ್ಫಿ ತೆಗೆದು ಸಂಭ್ರಮಿಸಿದ ತಮ್ಮ..!
ಮುಂಬೈ: ತಾಯಿಯ ಜೊತೆಗೆ ಸೇರಿ 19 ವರ್ಷದ ತನ್ನ ಸ್ವಂತ ಅಕ್ಕನ ತಲೆ ಕಡೆದ ಅಪ್ರಾಪ್ತ ತಮ್ಮ ಅದೇ ಕಡಿದ ತಲೆ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನ ವೈಜಾಪುರ್ ತೆಹಸಿಲ್ನ ಲಾಡ್ಗಾಂವ್ನಲ್ಲಿ ನಡೆದಿದೆ. ಯುವತಿಯ ತಲೆ ಕತ್ತರಿಸಿ, ಅದರ ಮುಂದೆ ತಾಯಿ ಮತ್ತು ತಮ್ಮ ಇಬ್ಬರು ಸೆಲ್ಫಿ ತೆಗೆದುಕೊಂಡು ವಿಕೃತಿ ಮೆರೆದಿದ್ದಾರೆ.
ಈತ ತನ್ನ ತಾಯಿಯೊಂದಿಗೆ ಸೇರಿಕೊಂಡು ಅಕ್ಕನ ತಲೆಯನ್ನು ಕುಡುಗೋಲಿನಿಂದ ಕತ್ತರಿಸಿದ್ದಾನೆ. ನಂತರ ಕತ್ತರಿಸಿದ ತಲೆಯೊಂದಿಗೆ ಸೆಲ್ಫಿ ತೆಗೆದುಕೊಂಡು ಸ್ನೇಹಿತರಿಗೆಲ್ಲಾ ಶೇರ್ ಮಾಡಿದ್ದಾನೆ. ತಲೆಯೊಂದಿಗೆ ಊರೆಲ್ಲಾ ಮೆರವಣಿಗೆ ಹೊರಟು ನೆರೆಹೊರೆಯವರಿಗೂ ತೋರಿಸಿ ವಿಕೃತಿ ಮೆರೆದಿದ್ದಾನೆ..
ಯುವತಿಯು ಕುಟುಂಬದವರ ವಿರೋಧದ ನಡುವೆಯೂ ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಮರ್ಯಾದಾ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಹಾಗೂ ಆತನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
19 ವರ್ಷದ ಕೀರ್ತಿ ಕೊಲೆಯಾದ ಯುವತಿಯಾಗಿದ್ದಾಳೆ. ಈಕೆ ಅದೇ ಗ್ರಾಮದ ಅಜಯ್ ಎಸ್.ಥೋರ್ ಎಂಬಾತನನ್ನು ಪ್ರೀತಿ, ಕೆಲ ದಿನಗಳ ಹಿಂದೆ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ಲು ಎನ್ನಲಾಗಿದೆ.. ಇಬ್ಬರೂ ಮದುವೆಯಾಗಿ ಗ್ರಾಮಕ್ಕೆ ಹಿಂತಿರುಗಿದ ನಂತರ ಕೀರ್ತಿ ತನ್ನ ಪತಿ ಅಜಯ್ ಮನೆಯಲ್ಲಿ ನೆಲೆಸಿದ್ದರು.
ಪತಿ ಮನೆಯಲ್ಲಿದ್ದ ಕೀರ್ತಿಯನ್ನು ಭೇಟಿಯಾಗುವ ನೆಪದಲ್ಲಿ ಬಂದಿದ್ದ ಸಹೋದರ ಹಾಗೂ ತಾಯಿ ಯಾರೂ ಇಲ್ಲದ ಟೈಮ್ ನೋಡಿ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾರೆ..