International : ಗಂಡನ ವೀರ್ಯ ಕೇಕ್ ನಲ್ಲಿ ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡಿ ವಿಕೃತಿ ಮೆರೆಯುತ್ತಿದ್ದ ಶಿಕ್ಷಕಿ..
ಅಮೆರಿಕಾ : ಕೆಲವರ ವಿಕೃತ ಮನಸ್ಥಿತಿ ಯಾವ ಹಂತಕ್ಕೆ ಎಂಥಹ ಕೆಲಸವನ್ನೂ ಬೇಕಿದ್ರೂ ಮಾಡಿಸುತ್ತದೆ… ಇಲ್ಲೊಬ್ಬ ಶಿಕ್ಷಕಿ ತನ್ನ ಪತಿಯ ವೀರ್ಯವನ್ನು ಕೇಕ್ನಲ್ಲಿ ಮಿಶ್ರಣ ಮಾಡಿ ಅದನ್ನ ತನ್ನ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದ ಲೂಸಿಯಾನಾದ ವೆಸ್ಟ್ ಸೈಡ್ ಜೂನಿಯರ್ ಹೈಸ್ಕೂಲಿನ ಶಿಕ್ಷಕಿಯಾಗಿದ್ದ 36 ವರ್ಷದ ಸಿಂಥಿಯಾ ಪಾರ್ಕಿನ್ಸ್ ಎಂಬಾಕೆ ಈ ನೀಚ ಕೆಲಸ ಮಾಡುತ್ತಿದ್ದಳು… ಈಕೆಗೆ ಇದೀಗ 40 ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ವಿಧಿಸಲಾಗಿದೆ..
ಅಂದ್ಹಾಗೆ ಈಕೆ ಈ ಹಿಂದೆಯೂ ತನ್ನ ತನ್ನ ವಿದ್ಯಾರ್ಥಿಗಳನ್ನು ಅಶ್ಲೀಲ ವೀಡಿಯೋ ಮಾಡಲು ಬಳಸಿಕೊಳ್ಳುತ್ತಿದ್ದಳು. ನಂತರ ಕೇಕ್ ರೆಡಿ ಮಾಡಿ ಮಕ್ಕಳಿಗೆ ತಿನ್ನಸುತ್ತಿದ್ದಳು. ಕೇಕ್ನಲ್ಲಿ ಗಂಡನ ವೀರ್ಯವನ್ನು ಬೆರೆಸುತ್ತಿದ್ದಳು ಎನ್ನಲಾಗಿದೆ. 2019ರಲ್ಲಿ ಶಿಕ್ಷಕಿಯನ್ನು ಅಶ್ಲೀಲ ವೀಡಿಯೋಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಳು. ಆ ನಂತರ ಹೆಚ್ಚಿನ ವಿಚಾರಣೆ ವೇಳೆ ಈಕೆಯ ವಿಕೃತಿ ಬೆಳಕಿಗೆ ಬಂದಿದೆ..
ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಹಲವರು ಪೋಷಕರು ಶಿಕ್ಷಕಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ತನಿಖೆಯ ವೇಳೆ ಎಲ್ಲಾ ಆರೋಪಗಳು ಸಾಬೀತಾಗಿವೆ. ಈಕೆಗೆ ಸಹಾಯ ಮಾಡುತ್ತಿದ್ದ ಈಕೆ ಪತಿಯ ಡೆನ್ನಿಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಈಕೆಯನ್ನ ಹುದ್ದೆಯಿಂದ ವಜಾ ಮಾಡಲಾಗಿದೆ. ಅಲ್ಲದೇ ಇವಳ ವಿರುದ್ಧ 90 ದೋಷಾರೋಪದ ಪಟ್ಟಿಗಳನ್ನು ಸಲ್ಲಿಸಲಾಗಿದೆ. ಆರೋಪಗಳೆಲ್ಲವೂ ಸಾಬೀತಾಗಿದ್ದು 40 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ.








