ಮದುವೆಯಾಗದೇ ಮಗು ಕೊಟ್ಟ : ತಡರಾತ್ರಿ ಪ್ರೇಯಸಿ, ಆಕೆಯ ತಾಯಿಯನ್ನ ಕೊಂದ..!
ಬೆಂಗಳೂರು: ಮದುವೆಗೂ ಮುಂಚೆಯೇ ಪ್ರೇಯಸಿ ಮಗುವಿಗೆ ಜನ್ಮ ನೀಡಿದ ಬಳಿಕ ಮದುವೆಯಾಗುವಂತೆ ಪೀಡಿಸುತ್ತಿದ್ದ ಹಿನ್ನೆಲೆ ಆಕೆ ಹಾಗೂ ಆಕೆಯ ತಾಯಿಯನ್ನ ಪ್ರಿಯಕರ ಬರ್ಬರವಾಗಿ ಹತ್ಯೆಗೈದಿದ್ದಾನೆ. ಪ್ರಿಯತಮೆ ಮತ್ತು ಆಕೆಯ ತಾಯಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ.
ಬಾಯ್ಸ್ ಕೂಡ ಸೇಫ್ ಅಲ್ಲ…! ಯುವಕನ ಮೇಲೆ ಗ್ಯಾಂಗ್ ಗ್ಯಾಂಗ್ ರೇಪ್..!
ಒರಿಸ್ಸಾ ಮೂಲದ 40 ವರ್ಷದ ಮಲಯ ಫರೀದ್ ಕೊಲೆ ಆರೋಪಿಯಾಗಿದ್ದಾನೆ. ಈತ 30 ವರ್ಷದ ರಮಾದೇವಿ ಮತ್ತು ಆಕೆಯ ತಾಯಿ ಲಕ್ಷ್ಮೀದೇವಿ(50)ಯನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮಲಯ ಮತ್ತು ರಮಾದೇವಿ ಒಟ್ಟಿಗೇ ಇದ್ದರು. ಆದರೆ ಮದುವೆಯಾಗಿರಲಿಲ್ಲ. ಅವರಿಗೆ ಐದು ತಿಂಗಳ ಮಗು ಇತ್ತು. ಇದೇ ಕಾರಣಕ್ಕೆ ಅಳಿಯ ಎಲ್ಲಿ ತನ್ನ ಮಗಳಿಗೆ ಕೈಕೊಟ್ಟು ಹೋಗುತ್ತಾನೋ ಎನ್ನುವ ಭಯದಲ್ಲಿ ರಮಾದೇವಿಯ ಅಮ್ಮ ಲಕ್ಷ್ಮಿ ಅವರು, ಮಗಳನ್ನು ಮದುವೆಯಾಗುವಂತೆ ಮಲಯನಿಂದ ಒತ್ತಾಯ ಮಾಡುತ್ತಿದ್ದರು. ಇದರಿಂದ ಕುಪಿತಗೊಂಡ ಆರೋಪಿ ಮಧ್ಯರಾತ್ರಿ ಅತ್ತೆ ಕತ್ತು ಕೊಯ್ದು ಕೊಂದಿದ್ದಾನೆ. ನಂತರ ವಿಷಯ ತಿಳಿದು ಗಾಬರಿಯಿಂದ ಕಿರುಚಿದ ಪತ್ನಿಯನ್ನು ಸಹ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆತನೇ ಪೊಲೀಸರಿಗೆ ಶರಣಾಗಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel