ಉತ್ತರಪ್ರದೇಶ : 7 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನ ವಿಧಿಸಿದೆ..
7 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಆರಂಭಗೊಂಡು ಕೇವಲ 9 ದಿನದಲ್ಲಿ ದೋಷಿಗೆ ಶಿಕ್ಷೆ ವಿಧಿಸಲಾಗಿದೆ..
ನ್ಯಾಯಮೂರ್ತಿ ಮುಮ್ತಾಜ್ ಅಲಿ ಅವರು 21 ವರ್ಷದ ಆರೋಪಿ ವಾಸಿಲ್ ಗೆ 45,000 ದಂಡವನ್ನು ಹಾಕಿ ಶಿಕ್ಷೆ ಪ್ರಕಟಿಸಿದ್ದಾರೆ.. ಇದರಲ್ಲಿ ಅರ್ಧದಷ್ಟು ದುಡ್ಡನ್ನು ಸಂತ್ರಸ್ತ ಬಾಲಕನಿಗೆ ನೀಡುವಂತೆ ನ್ಯಾಯಾಲಯವು ತಿಳಿಸಿದೆ.
ಪ್ರಕರಣದ ಆರೋಪಿಯು ಐಸ್ ಕ್ಯಾಂಡಿಯ ಆಸೆ ತೋರಿಸಿ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದ. ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ..
ಏಪ್ರಿಲ್ 1ರಂದ ಕೈರಾನಾ ಪ್ರದೇಶದಲ್ಲಿ ಕೃತ್ಯ ನಡೆದಿತ್ತು. 2022, ಜೂ.1ರಂದು ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಜೂ.21ರಂದು ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಿತ್ತು.9 ದಿನಗಳೊಳಗೆ ಶಿಕ್ಷೆ ಪ್ರಕಟವಾಗಿದೆ..







