ಕಲಬುರಗಿ: ಚಿತ್ತಾಪುರ (Chittapur) ಪಟ್ಟಣದ ಹೊರವಲಯದಲ್ಲಿನ ಚಿತ್ತಾಪುರ-ಕರದಳ್ಳಿ ರಸ್ತೆಯಲ್ಲಿರುವ ಸೈಯದ್ ಪೀರ್ ದರ್ಗಾವನ್ನು ಕಿಡಿಗೇಡಿಗಳು ಧ್ವಂಸಗೊಳಿಸುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ದರ್ಗಾದ ಗೇಟಿನ ಬೀಗ ಮುರಿದು, ಸುತ್ತ ಕಟ್ಟಿದ ಕಟ್ಟೆ ಮತ್ತು ದರ್ಗಾದ ಮೇಲೆ ಸ್ಥಾಪಿಸಿದ ಗೋಪುರವನ್ನು ಧ್ವಂಸಗೊಳಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಹೊಂದಿರುವ ಸೈಯದ್ ಪೀರ್ ದರ್ಗಾವನ್ನು ಧ್ವಂಸಗೊಳಿಸಿರುವುದು ಸಾರ್ವಜನಿಕ ವಲಯದ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ದರ್ಗಾವನ್ನೇ ಗುರಿಯಾಗಿಸಿಟ್ಟಿಕೊಂಡು ದರ್ಗಾವನ್ನು ಧ್ವಂಸಗೊಳಿಸಿರುವುದು ಸರಿಯಲ್ಲ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ, ದರ್ಗಾದ ಉಸ್ತುವಾರಿ ಸೈಯದ್ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.