Cristiano Ronaldo ವಿಶ್ವ ದಾಖಲೆ ಬರೆದ ರೊನಾಲ್ಡೊ..!!!
ತಾರಾ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಫಿಫಾ ವಿಶ್ವಕಪ್ನಲ್ಲಿ
ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ದಾಖಲೆ ಬರೆದರು.
ದೋಹಾದ 974 ಕ್ರೀಡಾಂಗಣದಲ್ಲಿ ಘಾನಾ ವಿರುದ್ಧದ ಪಂದ್ಯದಲ್ಲಿ
ಪೋರ್ಚುಗಲ್ 3-2 ಗೋಲುಗಳಿಂದ ಗೆದ್ದುಕೊಂಡಿತು.
ರೊನಾಲ್ಡೊ 64ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಅವಕಾಶ ಪಡೆದು
ಗೋಲು ಹೊಡೆದರು.ಈ ಮೂಲಕ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡರು.
ಮೊದಲ ಅವಧಿಯಲ್ಲಿ ರೊನಾಲ್ಡೊಗೆ ಗೋಲು ಹೊಡೆಯಲು ಅವಕಾಶವಿದ್ದರೂ ಸಾಧ್ಯವಾಗಿರಲಿಲ್ಲ.
ರೊನಾಲ್ಡೊ ಈ ಹಿಂದೆ ಆಡಿದ್ದ ನಾಲ್ಕು ವಿಶ್ವಕಪ್ ಟೂರ್ನಿಗಳಲ್ಲೂ ಗೋಲು ಹೊಡೆದಿದ್ದರು. ಬ್ರೆಜಿಲ್ನ ಪೆಲೆ, ಜರ್ಮನಿಯ ಉವೆ ಸೀಲೆಲೆ ಮತ್ತು ಮಿರೊಸ್ಲಾವ್ ಕ್ಲೋಸ್ ಅವರುಗಳೊಂದಿಗೆ ದಾಖಲೆ ಹಂಚಿಕೊಂಡಿದ್ದರು. ಇದೀಗ ತಮ್ಮ ಐದನೆ ವಿಶ್ವಕಪ್ನಲ್ಲಿ ಗೋಲು ಹೊಡೆಯುವ ಮೂಲಕ ಎಲ್ಲರನ್ನೂ ಹಿಂದಿಕ್ಕಿದ್ದಾರೆ.
ಐದು ವಿಶ್ವಕಪ್ ಟೂರ್ನಿಗಳಲ್ಲಿ ಸತತವಾಗಿ ಗೋಲು ಹೊಡೆದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರಾದರು.
ರೊನಾಲ್ಡೊ ಬಲದಿಂದ ಪೋರ್ಚುಗಲ್ ಈ ಪಂದ್ಯವನ್ನು ಗೆದ್ದುಕೊಂಡಿದೆ.
ಪೋರ್ಚುಗಲ್ ಈ ಪಂದ್ಯದ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








