ಒಂದೆಡೆ ಕೊರೊನಾದಿಂದ ಗುಜರಾತ್ ಜನ ತತ್ತರಿಸಿಹೋಗಿದ್ರೆ ಮತ್ತೊಂದೆಡೆ ರಾಜ್ಯದ ನಾನಾ ಭಾಗಗಳಲ್ಲಿ ವರುಣ ತನ್ನ ರೌತ್ರರ‍್ತನ ಪ್ರದರ್ಶಿಸಿದ್ದಾನೆ. ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಪ್ರವಾಹ ಉಂಟಾಗಿದ್ದು ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ. ಇದರ ನಡುವೆ ಈಗ ಮೊಸಳೆ ಚೇಳಿನಂತಹ ಜಲಚರಗಳು, ವಿಷ ಜಂತುಗಳ ಭೀತಿಯಿಂದ ಜನರು ಕಾಲ ಕಳೆಯುವತಾಗಿದೆ.
ಗುಜರಾತ್ ನ ವಡೋದರಾ ಕೆಲಾನ್ ಪುರದಲ್ಲೂ ಬಾರೀ ಮಳೆಯಿಂದಾಗಿ ಜನರು ನಲುಗಿಹೋಗಿದ್ದಾರೆ. ಮಳೆಯ ಜೊತೆಗೆ ರಭಸವಾಗಿ ಹರಿದಿ ಮಳೆ ನೀರಿನ ಜೊತೆಗೆ ಹಳ್ಳಿಗೆ ಮೊಸಳೆ ನುಗ್ಗಿ ಬಂದಿದ್ದು, ಮೊಸಳೆ ಕಂಡ ಜನರು ಹೌಹಾರಿದ್ದಾರೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನ ವಶಕ್ಕೆ ಪಡೆದಿದ್ದಾರೆ. ಆದದ್ರೆ ಒಂದೆಡೆ ಕೊರೊನಾ ಹಾವಳಿ, ಮತ್ತೊಂದೆಡೆ ಪ್ರವಾಹದ ಭೀತಿ, ಇದೀಗ ಜಲಜಂತುಗಳ ಕಾಟ ಜನರ ಆತಂಕವನ್ನ ನೂರು ಪಟ್ಟು ಹೆಚ್ಚಿಸಿದೆ.
ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!
ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ...








