ಮಾವೋವಾದಿಗಳಿಂದ ಐಇಡಿ ಕೋಬ್ರಾ ಪಡೆಯ ಯೋಧರಿಗೆ ಗಾಯ
ಶುಕ್ರವಾರ ಬಿಹಾರದ ಗಯಾ ಜಿಲ್ಲೆಯ ಕಾಡಿನಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದರಿಂದ ಕೋಬ್ರಾ ಕಮಾಂಡೋ ಘಟಕಕ್ಕೆ ಸೇರಿದ ಸಿಆರ್‌ಪಿಎಫ್ ಅಧಿಕಾರಿ ಮತ್ತು ಯೊಧನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾ ದಿಂದ 100 ಕಿ.ಮೀ ದೂರದಲ್ಲಿರುವ ಚಕ್ರಬಂಧ ಅರಣ್ಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಹಾಯಕ ಕಮಾಂಡೆಂಟ್ ವಿಭೋರ್ ಕುಮಾರ್ ಸಿಂಗ್ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಹೆಡ್ ಕಾನ್‌ಸ್ಟೆಬಲ್ ಸುರೇಂದ್ರ ಸಿಂಗ್ ಕೂಡ ಗಾಯಗೊಂಡಿದ್ದಾರೆ.
ಮಾವೋವಾದಿಗಳು 205 ನೇ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಗಸ್ತು ತಂಡದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕತ್ತಲೆಯಿಂದಾಗಿ ರಕ್ಷಣಾ ಹೆಲಿಕಾಪ್ಟರ್ ಇಳಿಯಲು ಸಾಧ್ಯವಾಗದ ಕಾರಣ ಗಾಯಾಳುಗಳ ಜೊತೆಯಲ್ಲಿರುವ ಭದ್ರತಾ ಸಿಬ್ಬಂದಿ ಅವರನ್ನು ಹತ್ತಿರದ ರಸ್ತೆ ಮುಖಾಂತರ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ.








