ಎಂಎಸ್ ಡಿ ಬಳಿಕ ಸಿಎಸ್ ಕೆ ತಂಡದ ನಾಯಕ ಈತನೇ..!
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ರತ್ಯೇಕವಾದ ಸ್ಥಾನಮಾನವಿದೆ. ಚೆನ್ನೈ ವಿರುದ್ಧದ ಪಂದ್ಯ ಅಂದ್ರೆ ಘಟಾನುಘಟಿ ಆಟಗಾರರಿರುವ ತಂಡಗಳೇ ಕೊಂಚ ಜಾಗೃತವಾಗುತ್ತವೆ. ಐಪಿಎಲ್ ನಲ್ಲಿ ಯೆಲ್ಲೋ ಬ್ರಿಗೇಟ್ ಮಾಸ್ ಫಾಲೋಯಿಂಗ್ ಇದೆ. ಇದಕ್ಕೆ ಕಾರಣ ಮಹೇಂದ್ರ ಸಿಂಗ್ ಧೋನಿ.
ಇಂಡಿಯನ್ ಪ್ರಿಮಿಯರ್ ಲೀಗ್ ಮಟ್ಟಿಗೆ ಧೋನಿ ಅಂದ್ರೆ ಚೆನ್ನೈ, ಚೆನ್ನೈ ಅಂದ್ರೆ ಧೋನಿ ಎಂಬ ಮಾತಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸ್ವತಃ ಧೋನಿಯೇ ನಿವೃತ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಸಿಎಸ್ ಕೆ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಸಾಮಾನ್ಯವಾಗಿಯೇ ಎಲ್ಲರಲ್ಲೂ ಮೂಡಿದೆ.
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಆಸಕ್ತಿಕರ ಸುದ್ದಿವೊಂದು ಹರಿದಾಡುತ್ತಿದೆ. ಸದ್ಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸುತ್ತಿರುವ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಚೆನ್ನೈ ತಂಡದ ಮುಂದಿನ ನಾಯಕ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ.
ರುತುರಾಜ್ ಗಾಯಕ್ವಾಡ್ ಪ್ರಸ್ತುತ ಭೀಕರ ಫಾರ್ಮ್ ನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚೂರಿಗಳ ಮೂಲಕ ಧೂಳೆಬ್ಬಿಸುತ್ತಿದ್ದಾರೆ. ಈಗಾಗಲೇ ಹ್ಯಾಟ್ರಿಕ್ ಶತಕಗಳನ್ನು ಸಿಡಿಸಿರುವ ರುತುರಾಜ್, ಮಹಾರಾಷ್ಟ್ರ ತಂಡದ ನಾಯಕನಾಗಿಯೂ ಯಶ ಸಾಧಿಸುತ್ತಿದ್ದಾರೆ. ಇದು ಸಿಎಸ್ ಕೆ ಅಭಿಮಾನಿಗಳಲ್ಲಿ ಸಂತನವನ್ನುಂಟು ಮಾಡಿದೆ. ಅಲ್ಲದೇ ಚೆನ್ನೈ ತಂಡಕ್ಕೆ ಧೋನಿ ನಂತರ ರುತುರಾಜ್ ಕ್ಯಾಪ್ಟನ್ ಆದರೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ರುತುರಾಜ್ ಕ್ರಮವಾಗಿ 136, 154*, 124 ರನ್ಗಳನ್ನು ಗಳಿಸಿ 435 ರನ್ಗಳೊಂದಿಗೆ ಟಾಪ್ಸ್ಕೋರರ್ ಆಗಿ ಮುಂದುವರೆದಿದ್ದಾರೆ.









