ಪ್ರಾಕ್ಟೀಸ್ ವೇಳೆ ಧೋನಿ ಧನಾಧನ್ ಸಿಕ್ಸರ್ಸ್
ಈ ಬಾರಿಯ ಐಪಿಎಲ್ ಸೀಸನ್ ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿದ ಎಲ್ಲಾ ತಂಡಗಳಿಗಿಂತಲೂ ಮೊದಲೇ ಪ್ರಾಕ್ಟೀಸ್ ಶುರು ಮಾಡಿದೆ.
ಸೂರತ್‌ನಲ್ಲಿ ಪ್ರಾಕ್ಟೀಸ್ ಕ್ಯಾಂಪ್ ಆರಂಭಿಸಿರುವ ಧೋನಿ ಸೇನೆ ಅದಕ್ಕೆ ತಕ್ಕಂತೆ ಕಸರತ್ತು ಆರಂಭಿಸಿದೆ.
ಈಗಾಗಲೇ ನಲವತ್ತರ ಆಸುಪಾಸಿನಲ್ಲಿರುವ ಧೋನಿಗೆ ಇದು ಕೊನೆಯ ಐಪಿಎಲ್ ಆಗಲಿದೆ ಎಂಬುದು ಎಲ್ಲರ ಅಭಿಪ್ರಾಯ.
ಅದರಂತೆ ಸಿಎಸ್ ಕೆ ಕೂಡ ಧೋನಿಗೆ ಪ್ರಶಸ್ತಿ ನೀಡಿ ಸಖತ್ ವಿದಾಯ ನೀಡುವ ನಿರೀಕ್ಷೆಯಲ್ಲಿದೆ.
ಇತ್ತ ನೆಟ್ಸ್ ಗಳಲ್ಲಿ ಪ್ರಾಕ್ಟೀಸ್ ಶುರು ಮಾಡಿರುವ ಧೋನಿ ಸಿಕ್ಸರ್ ಗಳ ಸುರಿಮಳೆಗೈದಿದ್ದಾರೆ.
csk-ipl-2022-captian-ms-dhoni-hits-big-sixes
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಧೋನಿ ಮೂರು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಲಾಂಗನ್, ಲಾಂಗಾಫ್ ಮತ್ತು ಸ್ಟ್ರೈಟ್ ಕಡೆ ಧೋನಿ ಸಿಕ್ಸರ್ ಗಳನ್ನ ಬಾರಿಸಿದ್ದಾರೆ.
ಸದ್ಯ ಅಭ್ಯಾಸದಲ್ಲಿ ಧೂಳೆಬ್ಬಿಸುತ್ತಿರುವ ಧೋನಿ ಐಪಿಎಲ್ ನಲ್ಲಿ ಅಬ್ಬರಿಸುತ್ತಾರಾ ಕಾದು ನೋಡಬೇಕಾಗಿದೆ.
ಮಾರ್ಚ್ 26 ರಿಂದ KKR ಮತ್ತು CSK ನಡುವಿನ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್ ಪ್ರಾರಂಭವಾಗುತ್ತದೆ.
https://twitter.com/i/status/1501126700008361991









