CSK | ಚೆನ್ನೈ ವಿಷಯದಲ್ಲಿ ಸೇಮ್ ಸೀನ್ ರಿಪೀಟ್
ಐಪಿಎಲ್ 2022 ರಲ್ಲಿ ಸಿಎಸ್‌ಕೆ ವೈಫಲ್ಯಗಳ ಸರಣಿ ಮುಂದುವರೆದಿದೆ. ಶನಿವಾರ ನಡೆದ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಸಿಎಸ್‌ಕೆ ಸತತ ನಾಲ್ಕನೇ ಸೋಲನ್ನು ಅನುಭವಿಸಿದೆ.
ಮೊದಲಿಗೆ ಬ್ಯಾಟಿಂಗ್ ನಲ್ಲಿ ಮಿಂಚದ ಸಿಎಸ್ ಕೆ ನಂತರ ಬೌಲಿಂಗ್ ನಲ್ಲೂ ಅಬ್ಬರಿಸಲಿಲ್ಲ. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.
ಹಾಲಿ ಚಾಂಪಿಯನ್ ಹೆಸರಿಗೆ ತಕ್ಕಂತೆ ಆಟವಾಡದ ಚೆನ್ನೈ ಸೂಪರ್ ಕಿಂಗ್ಸ್, ಪಂದ್ಯದಿಂದ ಪಂದ್ಯಕ್ಕೆ ಕಳಪೆ ಪ್ರದರ್ಶನ ನೀಡುತ್ತಿದೆ.
ಈ ಹಿಂದೆ 150 ರನ್ ಗಳ ಗಡಿದಾಟಿದ ಬಳಿಕ ಚೆನ್ನೈ ತಂಡ ಸೋತ ಸಂದರ್ಭಗಳು ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿ ಸಿಎಸ್ ಕೆ ಇದೀಗ ಒಂದು ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಸೀಸನ್ ಒಂದರಲ್ಲಿ ಸಿಎಸ್ ಕೆ ಸತತ ನಾಲ್ಕು ಪಂದ್ಯಗಳನ್ನು ಸೋತಿದ್ದು ಇದು ಎರಡನೇ ಬಾರಿ. ಈ ಹಿಂದೆ 2010ರಲ್ಲಿ ಸಿಎಸ್‌ಕೆ ಸತತ ನಾಲ್ಕು ಪಂದ್ಯಗಳನ್ನು ಸೋತಿತ್ತು. ಆದರೆ ವಿಚಿತ್ರ ಏನಪ್ಪಾ ಅಂದ್ರೆ.. ಆ ಆವೃತ್ತಿಯಲ್ಲಿ ಚೆನ್ನೈ ಚಾಂಪಿಯನ್ ಆಗಿತ್ತು.
ಅದೇ ಸೀನ್ ಈಗ ರಿಪೀಟ್ ಆಗುತ್ತಾ ಎಂಬ ಕುತೂಹಲ ವಿದೆ. ಆದ್ರೆ ಅಸಾದ್ಯ ಎಂಬೋದು ಎಲ್ಲರ ವಾದ ಯಾಕೆಂದರೆ ಆಗ ಧೋನಿ ಚೆನ್ನೈ ತಂಡದ ನಾಯಕರಾಗಿದ್ದರು. csk-lost-4-consecutive-matches









