CSK | ಜಡ್ಡು ಕ್ಯಾಪ್ಟನ್ಸಿಗೆ ಚೆಕ್ ಮೇಟ್ ಇಟ್ಟಿದ್ದು ಯಾಕೆ..?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಸರ್ ಜಡೇಜಾ ಕೆಳಗಿಳಿದ್ದಿದ್ದು, ಸಾಕಷ್ಟು ಚರ್ಚೆ ಅನುಮಾನಗಳಿಗೆ ಕಾರಣವಾಗಿದೆ.
ಐಪಿಎಲ್ 2022 ರ ಋತುವಿನ ಆರಂಭಕ್ಕೂ ಮುನ್ನ ಧೋನಿ ನಾಯಕತ್ವದಿಂದ ಕೆಳಗಿಳಿದ ನಂತರ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಜಡೇಜಾ ಅವರನ್ನು ನಾಯಕರನ್ನಾಗಿ ನೇಮಿಸಿತ್ತು.
ಜಡೇಜಾ ಕೂಡ ಸಂತೋಷದಿಂದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದ್ರೆ ನಾಯಕತ್ವ ವಹಿಸಿಕೊಂಡ ನಾಲ್ಕು ವಾರಗಳಲ್ಲಿ ಸೀನ್ ರಿವರ್ಸ್ ಆಗಿದೆ.
ಚೆನ್ನೈ ತಂಡದ ನಾಯಕರಾಗಿ ವಿಫಲಗೊಂಡಿದ್ದು, ಎಂಟು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿದೆ. ಇತ್ತ ಕ್ಯಾಪ್ಟನ್ ಆಗಿ ಅಲ್ಲದೇ ಆಲ್ ರೌಂಡರ್ ಆಗಿಯೂ ಜಡೇಜಾ ವಿಫಲರಾಗಿದ್ದಾರೆ.

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಜಡ್ಡು ಮುಂಚಿನಂತೆ ಅಬ್ಬರಿಸುತ್ತಿಲ್ಲ. ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಎಂದು ಗುರುತಿಸಲ್ಪಟ್ಟಿರುವ ಜಡೇಜಾ ಈ ಋತುವಿನಲ್ಲಿ 8 ಪಂದ್ಯಗಳಲ್ಲಿ 112 ರನ್ ಗಳಿಸಿದ್ದಾರೆ, 8.19 ಎಕಾನಮಿಯೊಂದಿಗೆ ಕೇವಲ 5 ವಿಕೆಟ್ ಪಡೆದಿದ್ದಾರೆ. ಇದರ ಪರಿಣಾಮವೇ ಜಡೇಜಾ ನಾಯಕತ್ವದಿಂದ ಕೆಳಗಿಳಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ಯಾಟಿಂಗ್ ನತ್ತ ಗಮನ ಹರಿಸಲು ನಾಯಕತ್ವದ ಜವಾಬ್ದಾರಿಯನ್ನು ಧೋನಿಗೆ ವಹಿಸುತ್ತಿರುವುದಾಗಿ ಜಡೇಜಾ ಹೇಳಿದ್ದಾರೆ.
ಆದ್ರೆ ನಿಜವಾಗಿಯೂ ಜಡೇಜಾ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದಾರೋ ಅಥವಾ ಮ್ಯಾನೇಜ್‌ಮೆಂಟ್ ಒತ್ತಡಕ್ಕೆ ರಾಜೀನಾಮೆ ನೀಡಿದ್ರಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ಯಾಕಂದರೇ ಧೋನಿಗೆ ಇದು ಕೊನೆಯ ಐಪಿಎಲ್ ಆಗಿದ್ದು, ಚೆನ್ನೈ ತಂಡದ ಮುಂದಿನ ನಾಯಕನಿಗಾಗಿ ಫ್ರಾಂಚೈಸಿ ಹುಡುಕುತ್ತಿದೆ.
ಇದರ ಭಾಗವಾಗಿಯೇ ಜಡೇಜಾ ಅವರನ್ನ ನಾಯಕರನ್ನಾಗಿ ಮಾಡಲಾಗಿತ್ತು. ಆದ್ರೆ ಜಡ್ಡು ಕ್ಯಾಪ್ಟನ್ಸಿ ಟೆಸ್ಟ್ ನಲ್ಲಿ ಫೇಲ್ ಆಗಿದ್ದು, ಅವರನ್ನ ಸ್ವತಃ ಫ್ರಾಂಚೈಸಿಯೇ ನಾಯಕತ್ವದಿಂದ ಕೆಳಗಿಳಿಸಿದೆ ಎಂದು ಮೂಲಗಳು ತಿಳಿಸುತ್ತಿವೆ.
csk-management-unhappy-ravindra-jadeja captaincy








