2020ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಸಿಎಸ್‍ಕೆ ತಂಡದ 11 ಸಿಬ್ಬಂದಿಗಳು ಹಾಗೂ ಇಬ್ಬರು ಆಟಗಾರರು ಕೋವಿಡ್ ಸೋಂಕು ದೃಢವಾಗಿತ್ತು. ಹೀಗಾಗಿ ಸಿಎಸ್‍ಕೆ ತಂಡ ಕಳೆದ 10-12 ದಿನಗಳಿಂದ ಕ್ವಾರಂಟೈನಲ್ಲಿರಬೇಕಾಗಿತ್ತು. ಇನ್ನೊಂದು ಕಡೆ ಸುರೇಶ್ ರೈನಾ ಸಡನ್ ಆಗಿ ತಂಡದಿಂದ ಹೊರ ನಡೆದಿದ್ದರು. ಹಾಗೇ ಬಿಸಿಸಿಐಗೂ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರಾಳವಾಗಿದೆ. ಕೋವಿಡ್ ಸೋಂಕಿನ ಆತಂಕದಿಂದ ಹೊರಬಂದಿದೆ. ಕೊವಿಡ್ ಸೋಂಕಿಗೆ ಒಳಪಟ್ಟಿದ್ದ 13 ಮಂದಿ ಸೇರಿದಂತೆ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳ ಕೊವಿಡ್ ಟೆಸ್ಟ್ ಪರೀಕ್ಷೆ ನೆಗೆಟಿವ್ ಬಂದಿದೆ. ಆದ್ರಿಂದ ಸೆಪ್ಟಂಬರ್ 4ರಿಂದ ಸಿಎಸ್‍ಕೆ ತಂಡ ಅಭ್ಯಾಸ ಶುರು ಮಾಡಲಿದೆ. ಆದ್ರೆ ಕೋವಿಡ್ ಸೋಂಕಿಗೆ ಒಳಪಟ್ಟಿದ್ದ 13 ಮಂದಿಗೆ ಸೆಪ್ಟಂಬರ್ 4ರಂದು ಮತ್ತೊಂದು ಸುತ್ತಿನ ಪರೀಕ್ಷೆ ನಡೆಯಲಿದೆ. ದೀಪಕ್ ಚಾಹರ್ ಮತ್ತು ಋತುರಾಜ್ ಗಾಯಕ್ವಾಡ್ ಅವರು 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಮಾರ್ಗಸೂಚಿಯ ಪ್ರಕಾರ ಎರಡು ಟೆಸ್ಟ್ ಗಳಲ್ಲಿ ನೆಗೆಟಿವ್ ಬರಬೇಕು. ಆನಂತರ ಅವರಿಬ್ಬರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೆಪ್ಟಂಬರ್ 4ರಿಂದ ಚೆನ್ನೈ ತಂಡ ಅಭ್ಯಾಸ ಶುರು ಮಾಡುವ ಸಾಧ್ಯತೆ ಇದೆ ಎಂದು ತಂಡದ ಸಿಇಒ ಕಾಸಿ ವಿಶ್ವಾನಾಥನ್ ಹೇಳಿದ್ದಾರೆ.
ಈ ನಡುವೆ ತಂಡದಿಂದ ಹೊರನಡೆದಿರುವ ಸುರೇಶ್ ರೈನಾ ಅವರ ಬದಲಿ ಆಟಗಾರ ಯಾರು ಎಂಬುದು ಗೊತ್ತಾಗಿಲ್ಲ. ಸೆಪ್ಟಂಬರ್ 19ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಕೋವಿಡ್ ಸೋಂಕಿನ ಆತಂಕ, ಸುರೇಶ್ ರೈನಾ ತಂಡದಿಂದ ಹೊರ ನಡೆದಿರುವುದು ಹೀಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಿಎಸ್‍ಕೆ ತಂಡ ಆರಂಭದಲ್ಲೇ ಅನೇಕ ವಿಘ್ನಗಳನ್ನು ಎದುರಿಸಿದೆ. ಇದನ್ನೆಲ್ಲಾ ಕ್ಯಾಪ್ಟನ್ ಕೂಲ್ ಧೋನಿ ಯಾವ ರೀತಿ ನಿಭಾಯಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.