ಬೆಂಗಳೂರು : ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಸಿಟಿ ರವಿ ಅವರು ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ ಮಾಡಿದ್ದರು. ಆದರೆ, ಸಿಟಿ ರವಿ ಆರೋಪ ತಳ್ಳಿ ಹಾಕಿದ್ದರು. ಈಗ ಲಕ್ಷ್ಮೀ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಶ್ಲೀಲ ಪದವನ್ನು ಬಳಕೆ ಮಾಡಿಲ್ಲ ಎಂದು ಸಿ.ಟಿ. ರವಿ ಹೇಳಿದ್ದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಪದ ಬಳಕೆ ಮಾಡಿಲ್ಲ ಅಂತ ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳಿ, ನೋಡೋಣ. ಬನ್ನಿ ಧರ್ಮಸ್ಥಳಕ್ಕೆ ಪ್ರಮಾಣ ಮಾಡಿ ಹೇಳಿ. ನಾನು ನನ್ನ ಕುಟುಂಬ ಸಮೇತ ಬರುತ್ತೇನೆ. ನೀವೂ ನಿಮ್ಮ ಕುಟುಂಬ ಸಮೇತ ಬನ್ನಿ ಎಂದು ಸವಾಲು ಹಾಕಿದ್ದಾರೆ.