Politics : ಮತಾಂಧತೆಗೆ ಭಾರತದಲ್ಲಿ ಜಾಗ ಇಲ್ಲ : ಸಿ.ಟಿ ರವಿ
ಬೆಂಗಳೂರು : ನ್ಯಾಯಾಲಯದ ಮದ್ಯಂತರ ಆದೇಶ ಪಾಲಿಸಬೇಕಾದ್ದು ಎಲ್ಲರ ಕರ್ತವ್ಯ. ಅದನ್ನು ಮೀರಿ ಪರೀಕ್ಷೆ ಬೇಡ ಅಂತಾ ವಿದ್ಯಾರ್ಥಿಗಳು ವಾಪಸ್ ಹೋದರೆ ಅದು ಅವರಿಗೆ ಸೇರಿದ್ದು. ನಾಳೆ ರೈತರು ಪಟ್ಟಾಪಟ್ಟಿ ಚಡ್ಡಿ ಹಾಕಿ ನಾವು ರೈತರ ಮಕ್ಕಳು ಹೀಗೇ ಬರೋದು ಅಂದ್ರೆ, ಸಮವಸ್ತ್ರ ಇರೋದು ಎಲ್ಲ ಸಮಾನರು ಅಂತಾ ತೋರೋಕೆ ಎಂದು ಸಿಟಿ ರವಿ ಹೇಳಿದ್ದಾರೆ..
ಇನ್ನೂ ಮತದಾನದ ಹಕ್ಕೂ ಬಾರದ ಹದಿನಾರು, ಹದಿನೇಳು ವರ್ಷದ ವಿದ್ಯಾರ್ಥಿಗಳು ಅವರು. ಯುಪಿ ಚುನಾವಣೆ ರಿಸಲ್ಟ್ ಬರುವ ವರೆಗೆ ವಿಚಾರಣೆ ಮುಂದೂಡಿ ಅಂತಾರೆ. ಇದರ ಹಿಂದೆ ಹಿಡನ್ ಅಜೆಂಡಾ ಇಲ್ಲವೇ. ಅಂತಹಾ ಮತಾಂಧತೆಗೆ ಭಾರತದಲ್ಲಿ ಜಾಗ ಇಲ್ಲ. ನಾವು ಅಹಿಂದ ಅಜೆಂಡಾದವರಲ್ಲ, ನಾವು ಜೈಹಿಂದ್ ಅಜೆಂಡಾದವರು ಎಂದಿದ್ದಾರೆ..








