ತುಮಕೂರು : ನಮ್ಮಲ್ಲಿ ಒಬ್ಬರಿಗೆ ಒಂದು ಹುದ್ದೆ ಅನ್ನೋ ನಿಯಮ ಇದೆ. ಅದನ್ನು ಗಮನಿಸಿ ಸಿ.ಟಿ.ರವಿ ರಾಜೀನಾಮೆ ಕೊಡ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಮ್ಮಲ್ಲಿ ವರಿಷ್ಠರೇ ಪಕ್ಷದ ಅಲಿಖಿತ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಸಿ.ಟಿ ರವಿ ಹೇಳಿಕೆ ಬಗ್ಗೆ ಶಿರಾದಲ್ಲಿ ಮಾತನಾಡಿದ ಕಟೀಲ್, ಅವ್ರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ಕೊಡ್ತಾರೆ.
ಈಗಾಗಲೇ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ರಾಜೀನಾಮೆಗೆ ರೆಡಿ ಇದ್ದೀನಿ ಅಂತಾ ಹೇಳಿದ್ದಾರೆ ಎಂದರು.
ಇದನ್ನೂ ಓದಿ : 10 ದಿನ ರಾಜ್ಯದಾದ್ಯಂತ ಪುನಃ ಲಾಕ್ ಡೌನ್ ಘೊಷಿಸಬೇಕು : ಅಪ್ಪಚ್ಚು ರಂಜನ್
ಇದೇ ವೇಳೆ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿಯವರನ್ನು ಪೊಲೀಸರು ವಶಕ್ಕೆ ಪಡೆದ ಬಗ್ಗೆ ಮಾತನಾಡಿದ ನಳಿನ್ ಕುಮಾರ್, ಅತ್ಯಾಚಾರವನ್ನ ರಾಹುಲ್ ಗಾಂಧಿ ರಾಜಕೀಯ ಮಾಡಲಿಕ್ಕೆ ಹೊರಟ್ಟಿದ್ದಾರೆ.
ಏಕಾಏಕಿ ಅತ್ಯಾಚಾರ ವಿಚಾರವನ್ನ ರಾಜಕೀಯ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದರು.








