ಸಿ.ಟಿ.ರವಿ ನಾಲಿಗೆಗೆ ಸ್ವಲ್ಪ ಇಟ್ಟಿಗೆ ತಗೊಂಡು ಉಜ್ಜಿ : ಕೆ.ಎನ್.ರಾಜಣ್ಣ CT Ravi
ತುಮಕೂರು : ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಿಡಿಕಾರಿದ್ದು, ಅವರ ನಾಲಿಗೆಗೆ ಸ್ವಲ್ಪ ಇಟ್ಟಿಗೆ ತಗೊಂಡು ಉಜ್ಜಿ ಪಾವನ ಮಾಡಬೇಕು ಎಂದಿದ್ದಾರೆ.
ಮಧುಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವುದು ಸಣ್ಣತನದ ಪರಮಾವಧಿಯಾಗಿದೆ. ಕ್ಯಾಂಟೀನ್ ಹೆಸರು ಬದಲಾಯಿಸೋದನ್ನ ಬಿಟ್ಟು ಅದೇ ಹೆಸರಲ್ಲಿ ಬೇರೆ ಯಾವುದಾದರೂ ಬಡವರ ಪರ ಕಾರ್ಯಕ್ರಮ ರೂಪಿಸಲಿ ಎಂದು ಸಲಹೆ ನೀಡಿದರು..
ಇನ್ನು ಇಂದಿರಾ ಗಾಂಧಿಯವರ ಹೆಸರು ಇಡೀ ಪ್ರಪಂಚವೇ ನೆನಪಿಸಿಕೊಳ್ಳುವಂತಹದ್ದು. ಇಂಡಿಯಾ ಎಂದರೆ ಇಟ್ ಇಸ್ ಇಂದಿರಾ ಎಂದರ್ಥ. ಸಿಟಿ ರವಿ ಯಾರ್ರೀ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರು ಹುಟ್ಟೇ ಇರಲಿಲ್ಲ ಈ ಗಿರಾಕಿ. ಸ್ವಾತಂತ್ರ್ಯ ತರಲಿಕ್ಕೆ ಎಷ್ಟು ಕಷ್ಟ ಅನುಭವಿಸಿದ್ದಾರೆ ಗೊತ್ತಾ ಇವರಿಗೆ ಎಂದು ಪ್ರಶ್ನೆ ಮಾಡಿದರು.