ಮೋದಿ ಪ್ರಧಾನಿಯಾಗಲ್ಲ ಎಂದಿದ್ರು ಸಿದ್ದರಾಮಯ್ಯ ಅವರು, 2 ಬಾರಿ ಪ್ರಧಾನಿಯಾಗಿಲ್ವಾ..? – ಸಿಟಿ ರವಿ
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನಡುವೆ ಮಾತಿನ ವಾಕ್ ಸಮರ ಮುಂದುವರೆದಿದೆ.. ವವಿವಾದಾತ್ಮಕ ಹೇಳಿಕೆಗಳನ್ನ ನೀಡುತ್ತಾ ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಹಹೆಸರು ಬದಲಾಯಿಸುವ ಸಿಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ಅವರು ಸಖತ್ ಟಾಂಗ್ ಕೊಡುತ್ತಾ ಬಂದಿದ್ದಾರೆ.. ಇದೀಗ ಸಿಟಿ ರ್ವಿ ಮತ್ತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಲೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಭವಿಷ್ಯ ಹೇಳಲು ಸಿದ್ದರಾಮಯ್ಯ ಅವರೇನು ಕಾಲಜ್ಞಾನಿಯೇ. ಅವರು ಹೇಳಿದ್ದಕ್ಕೆ ತದ್ವಿರುದ್ಧವಾಗಿ ಎಲ್ಲ ನಡೆಯುತ್ತೆ. ಮೋದಿ ಅವರು ಪ್ರಧಾನಿಯಾಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು, ಮೋದಿ ಎರಡು ಬಾರಿ ಪ್ರಧಾನಿಯಾಗಲಿಲ್ಲವೇ. ಬಾಯಿಯಲ್ಲಿ ಮಚ್ಚೆ ಇದ್ದವರು ಹೇಳಿದ್ದು ನಡೆಯುತ್ತೆ ಎಂದು ಹೇಳಲಾಗುತ್ತದೆ. ಸಿದ್ದರಾಮಯ್ಯ ಬಾಯಿಯಲ್ಲಿ ಇರುವುದು ಉಲ್ಟಾ ಮಚ್ಚೆ. ಹಾಗಾಗಿ, ಹೀಗೆ ಆಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
75ನೇ ಸ್ವಾತಂತ್ರ್ಯ ದಿನ : ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಧ್ವಜಾರೋಹಣ








