ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಳ
ನ.1ರಿಂದಲೇ ಹೊಸ ದರ ಜಾರಿ
ಬೆಂಗಳೂರು: ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಲಾಕ್‍ಡೌನ್‍ನ ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದು, ಸುಧಾರಿಸಿಕೊಳ್ಳಲು ಪರದಾಡುತ್ತಿರುವ ಬೆನ್ನಲ್ಲೇ ಸರ್ಕಾರ ಕರೆಂಟ್ ಶಾಕ್ ನೀಡಿದೆ.
ಲಾಕ್‍ಡೌನ್‍ನಿಂದಾಗಿ ಉದ್ಯೋಗ ಕಳೆದುಕೊಂಡು, ದಿನದ ಕೂಲಿ, ವ್ಯಾಪಾರ-ವಹಿವಾಟು ಬಂದ್ ಆಗಿ ಜನರು ಬೀದಿಗೆ ಬಿದ್ದಿರುವ ಬೆನ್ನಲ್ಲೇ ಕನ್ನಡಿಗರಿಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಲಾಗಿದೆ.

ಲಾಕ್‍ಡೌನ್ ಕಾರಣದಿಂದ ತಡೆಹಿಡಿಯಲಾಗಿದ್ದ ವಿದ್ಯುತ್ ದರ ಏರಿಕೆಯನ್ನು ಇದೀಗ ಏರಿಕೆ ಮಾಡಿರುವ ಕೆಇಆರ್ ಸಿ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ರಾಜ್ಯದ ಜನರಿಗೆ ಶಾಕ್ ನೀಡಿದೆ.
ಪ್ರತಿಯೂನಿಟ್ ವಿದ್ಯುತ್ ದರವನ್ನು 40 ಪೈಸೆ ಹೆಚ್ಚಳಕ್ಕೆ ಕೆಇಆರ್ ಸಿ ಅನುಮತಿ ನೀಡಿ ಆದೇಶ ಹೊರಡಿಸಿದ್ದು, ಹೊಸ ದರ ನವೆಂಬರ್ 1ರಿಂದಲೇ ಅನ್ವಯವಾಗಲಿದೆ.

ಹೆಚ್ಚುವರಿ ವಿದ್ಯುತ್ ಬಳಕೆಯಾಗಿರುವ ಜೊತೆಗೆ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪನೆಗೂ ಹೆಚ್ಚು ಖರ್ಚಾಗಿದೆ. ಇದನ್ನು ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್‍ಗೆ 40 ಪೈಸೆ ಹೆಚ್ಚಳ ಮಾಡಲಾಗಿದೆ. ಐದು ತಿಂಗಳ ಮಟ್ಟಿಗೆ ಹೊಸ ದರ ಜಾರಿಯಲ್ಲಿ ಇರಲಿದೆ. ಲಾಕ್‍ಡೌನ್ ನಂತರ ನಡೆದ ಆರ್.ಆರ್ ನಗರ ಹಾಗೂ ಶಿರಾ ಉಪಚುನಾವಣೆ ಬಳಿಕ ವಿದ್ಯುತ್ ದರವನ್ನು ಏರಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








