ಕೂದಲಿಗೆ ಕಲರ್ ಹಚ್ಚುವ ವಿಚಾರಕ್ಕೆ ಜಗಳ , ಕೊಲೆಯಲ್ಲಿ ಅಂತ್ಯ
ಗ್ರಾಹಕನ ಎದೆಗೆ ಕತ್ತರಿಯಿಂದ ಇರಿದ ಕೊಲೆಗೈದ ಕ್ಷೌರಿಕ
ಅಸಂಗಿಯ ಪ್ರಜ್ವಲ್ ಜೆಂಟ್ಸ್ ಪಾರ್ಲರ್ ನಲ್ಲಿ ಘಟನೆ
ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮ
22 ವರ್ಷದ ಸಾಗರ ಅವಟಿ ಕೊಲೆಯಾದ ಯುವಕ
ಕೂದಲಿಗೆ ಬಣ್ಣ ಹಾಕುವ ವಿಚಾರವಾಗಿ ಆರಂಭವಾದ ಜಗಳ ಗ್ರಾಹಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ..
ಹೌದು ಸಲೂನ್ ನಲ್ಲಿ ತಲೆ ಕೂದಲಿಗೆ ಕಲರ್ ಹಾಕುವ ಬೆಲೆಯ ವಿಚಾರವಾಗಿ ಜಗಳವು ಆರಂಭವಾಗಿದೆ.. ಗಲಾಟೆ ಅತಿರೇಕಕ್ಕೆ ಹೋಗಿದ್ದು ಕ್ಷೌರಿಕ ಗ್ರಾಹಕನಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ. 22 ವರ್ಷದ ಸಾಗರ ಅವಟಿ ಕೊಲೆಯಾದ ಯುವಕನಾಗಿದ್ದಾನೆ.
ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ ಎಂದು ಹೇಳಲಾಗಿದೆ. ಈ ಘಟನೆ ಅಸಂಗಿ ಗ್ರಾಮದ ಪ್ರಜ್ವಲ್ ಜೆಂಟ್ಸ್ ಪಾರ್ಲರ್ ನಲ್ಲಿ ನಡೆದಿದ್ದು, ಸಾಗರ ಎಂಬ ಯುವಕ ತಲೆಗೆ ಬಣ್ಣ ಹಚ್ಚಿಸಿಕೊಳ್ಳಲು ಸಲೂನ್ ಗೆ ಆಗಮಿಸಿದ್ದ. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಬಣ್ಣ ಹಚ್ಚಲು ಮುಂದಾಗಿದ್ದ ವೇಳೆ ಪಕ್ಕದ ಟೇಬಲ್ನಲ್ಲಿ ಸದಾಶಿವ ನಾವಿ ಎಂಬ ಕ್ಷೌರಿಕ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದ.
ಕಲರ್ ಹಚ್ಚಲು 29 ರೂಪಾಯಿ ಕೊಡುವುದಾಗಿ ಲಕ್ಷ್ಮಣನಿಗೆ ಸಾಗರ ಹೇಳಿದ್ದ. ಇದಕ್ಕೆ ತಕರಾರು ತೆಗದ ಸದಾಶಿವ ನಾವಿ ಜಗಳಕ್ಕೆ ಮಾಡಿದ್ದಾನೆ.. ಈ ಹಿಂದೆ ಸದಾಶಿವ ನಾವಿಯನ್ನು ಸಾಗರ ರೇಗಿಸುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಬಾರಿ ಈತ ಸಾಗರ ಜೊತೆ ಜಗಳಕ್ಕೆ ಇಳಿದಿದ್ದ ಎಂದು ಹೇಳಲಾಗಿದೆ.
ಇಬ್ಬರ ಜಗಳ ತಾರಕಕ್ಕೇರಿದಾಗ ಸದಾಶಿವ ಕತ್ತರಿಯಿಂದ ಸಾಗರನ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಕೂಡಲೆ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದಾಶಿವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.








