ನಾಳೆ ಕಾಂಗ್ರೆಸ್ ಎಐಸಿಸಿ ಕಚೇರಿಯಲ್ಲಿ ಸಿಡಬ್ಲುಸಿ ಸಭೆ | ಪಕ್ಷದ ಅಧ್ಯಕ್ಷ ಗಾದಿಗೆ ಚುನಾವಣೆ ಸಾಧ್ಯತೆ – Saaksha Tv
ನವದೆಹಲಿ: ಪಂಚರಾಜ್ಯದ ಸೋಲಿನ ನಂತರ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ತಮ್ಮ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲು ನಿರ್ಧರಿಸದ್ದಾರೆ.
ನಿನ್ನೆ ರಾತ್ರಿ ಗುಲಾಂ ನಬೀ ಆಜಾದ್ ನಿವಾಸದಲ್ಲಿ ಸಭೆ ಸೇರಿದ ಜಿ-23 ನಾಯಕರು, ಕೂಡಲೇ ಎಐಸಿಸಿ ಅಧ್ಯಕ್ಷೀಯ ಚುನಾವಣೆ ನಡೆಸುವಂತೆ ಒತ್ತಾಯಿಸಿದರು. ಶಶಿ ತರೂರ್ ಟ್ವೀಟ್ ಮಾಡಿ, ನಮಗೆ ಯಶಸ್ಸು ಬೇಕಿದ್ದರೆ ಬದಲಾವಣೆ ಅನಿವಾರ್ಯ ಎಂದಿದ್ದರು. ಆದರೆ ಇದಕ್ಕೆ ಸೋನಿಯಾ ಗಾಂಧಿ ನಿಷ್ಠರು ಮಾತ್ರ, ಗಾಂಧಿ ಕುಟುಂಬದ ನಾಯಕತ್ವ ಇಲ್ಲದೇ ಪಕ್ಷ ಉಳಿಯಲ್ಲ ಅಂತಿದ್ದಾರೆ.
ನಾಳೆ ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಿಡಬ್ಲುಸಿ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಗಾಂಧಿ ಕುಟುಂಬದ ಮೇಲೆ ನಿಷ್ಠೆ ಹೊಂದಿರುವವರಿಂದ್ಲೇ ತುಂಬಿರುವ ಕಾರ್ಯಕಾರಣಿ ಮಂಡಳಿ ಇದಕ್ಕೆ ಅವಕಾಶ ನೀಡುತ್ತಾ? ಒಪ್ಪಿಗೆ ಸೂಚಿಸುತ್ತಾ? ಪ್ರತಿಬಾರಿಯಂತೆ ಈ ಸಭೆಯಲ್ಲೂ ಈ ಹೈಡ್ರಾಮಾದಲ್ಲೇ ಮುಗಿಯುತ್ತಾ? ಅಥವಾ ನಿಜವಾಗಿಯೂ ಸೋನಿಯಾ ಕುಟುಂಬ ವರ್ಗ ರಾಜೀನಾಮೆ ನೀಡಿ, ಹೊಸಬರಿಗೆ ಅವಕಾಶ ನೀಡುತ್ತಾ? ಪಕ್ಷದಲ್ಲಿ ಹೊಸ ಗಾಳಿ ಬೀಸುತ್ತಾ ಎಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ.








