ತಮಿಳುನಾಡಿಗೆ ಅಪ್ಪಳಿಸಲಿದೆ ನಿವಾರ್ ಚಂಡಮಾರುತ : ಅಧಿಕ ಮಳೆ ಸಾಧ್ಯತೆ
ತಮಿಳುನಾಡು : ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇಂದಿನಿಂದ ಎರಡು ದಿನಗಳ ಕಾಲ ತಮಿಳುನಾಡಿನಲ್ಲಿ ಅಧಿಕ ಮಳೆಯಾಗಲಿದೆ.
ದಕ್ಷಿಣ ಆಂಧ್ರ ಪ್ರದೇಶ ಭಾಗದಲ್ಲೂ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ. ಏತನ್ಮಧ್ಯೆ ನಿವಾರ್ ಎಂಬ ಚಂಡಮಾರುತ ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದ್ದು ಆ ಭಾಗಗಳಲ್ಲಿ ಅಧಿಕ ಮಳೆಯಾಗಲಿದೆ.
ನಿವಾರ್ ಚಂಡಮಾರುತವು ಹೆಚ್ಚಾಗಿ ತಮಿಳುನಾಡಿನ ಉತ್ತರ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ತಜ್ಞರ ಪ್ರಕಾರ, ಈ ನಿವಾರ್ ಚಂಡಮಾರುತವು ಮುಂದಿನ 48 ಗಂಟೆಗಳ ಕಾಲ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ದಾಟಿ ಹೋಗುತ್ತದೆ. ನವೆಂಬರ್ 25ರ ಮಧ್ಯಾಹ್ನದವರೆಗೆ ಈ ಚಂಡಮಾಡುತದ ಅಬ್ಬರ ಇರಲಿದೆ ಎಂದು ತಿಳಿಸಿದ್ದಾರೆ.
ಉದ್ಯೋಗ ಪಡೆಯಲು ತಂದೆಯನ್ನು ಹತ್ಯೆ ಮಾಡಿದ ನಿರುದ್ಯೋಗಿ ಮಗ
ನಿವಾನ್ ಚಂಡಮಾರುತದ ಸಂದರ್ಭದಲ್ಲಿ ಗಾಳಿಯ ವೇಗವು ಗಂಟೆಗೆ 100 ಕಿ.ಮೀ. ಇರಲಿದ್ದು, ರಾಯಲಸೀಮಾ ಮತ್ತು ದಕ್ಷಿಣ ಕರಾವಳಿ ಜಿಲ್ಲೆಗಳ ನಿರ್ಜನ ಪ್ರದೇಶಗಳಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆ ಯನ್ನು ಉಂಟುಮಾಡಬಹುದು’ ಎಂದು ಐಎಂಡಿಯ ಆಂಧ್ರ ಪ್ರದೇಶ ನಿರ್ದೇಶಕ ಎಸ್ ಸ್ಟೆಲ್ಲಾ ಹೇಳಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿ ಐಟಿಐ/ಡಿಪ್ಲೊಮಾ ಆದವರಿಗೆ ಉದ್ಯೋಗಾವಕಾಶ
ನವೆಂಬರ್ 25ರಿಂದ ಈ ನಿವಾರ್ ಚಂಡಮಾರುತದಿಂದ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಅಧಿಕ ಮಳೆಯಾಗಲಿದೆ.
ಹೀಗಾಗಿ ಮುನ್ನೆಚರಿಕಾ ಕ್ರಮವಾಗಿ ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಇತ್ತ ವಿಶಾಖಪಟ್ಟಣ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಬೀಳುವ ಸಾಧ್ಯತೆ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










