ಹುಬ್ಬಳ್ಳಿ: ಉಣಕಲ್‌ನ ಅಚ್ಚವ್ವ ಕಾಲೊನಿಯಲ್ಲಿ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಮತ್ತೊಬ್ಬರು ಅಯ್ಯಪ್ಪ ಮಾಲಾಧಾರಿ (Ayyappa Devotees) ಸಾವನ್ನಪ್ಪಿದ್ದು, ಆ ಮೂಲಕ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ರಾಜೂ ಮೂಗೇರಿ (16) ಮೃತಪಟ್ಟ ಬಾಲಕ. ಮೊದಲು ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಕಾರಿಯಾಗದೇ ಮಾಲಾಧಾರಿ ಬಾಲಕ ಸಾವನ್ನಪ್ಪಿದ್ದಾರೆ.
ಇನ್ನುಳಿದ ಐವರು ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಉಣಕಲ್‌ನ ಅಚ್ಚವ್ವ ಕಾಲೊನಿಯಲ್ಲಿ ಸಿಲಿಂಡರ್ ಸೋರಿಕೆಯಿಂದಾಗಿ ಒಂಬತ್ತು ಜನ ಅಯ್ಯಪ್ಪ ಮಾಲಾಧಾರಿಗಳು ಗಂಭೀರಗೊಂಡಿದ್ದರು. ಈ ಪೈಕಿ ನಿನ್ನೆ ಇಬ್ಬರು ಹಾಗೂ ಇಂದು ಇಬ್ಬರು ಮಾಲಾಧಾರಿಗಳು ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್ನುಳಿದ ಮಾಲಾಧಾರಿಗಳ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ. ಸದ್ಯ ಇನ್ನುಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...








