ಕೊನೆಯ ಹಂತದ ಕ್ರಾಂತಿಗಾಗಿ ಪೋಲ್ಯಾಂಡ್ ನಲ್ಲಿ ಬೀಡು ಬಿಟ್ಟ ಡಿ ಬಾಸ್ ……
ಚಾಲೆಂಜಿಗ್ ಸ್ಟಾರ್ ತೂಗುದೀಪ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಹವಾ ರಾಜ್ಯದಲ್ಲಾಗಲೇ ಶುರುವಾಗಿಬಿಟ್ಟಿದೆ.. ಡಿ ಬಾಸ್ ಅಭಿಮಾನಿಗಳೇ ಸ್ವಂ ಪ್ರೇರಿತರಾಗಿ ಪ್ರಮೋಷನ್ ಮಾಡುತ್ತಿರುವುದು ಈ ಚಿತ್ರದ ವಿಶೇಷ.
ದರ್ಶನ್ ಫ್ಯಾನ್ಸ್ ಸಿನಿಮಾವನ್ನ ರಾಜ್ಯಾದ್ಯಂತ ಸಖತ್ ಅದ್ಧೂರಿಯಾಗಿಯೇ ಪ್ರಚಾರ ಮಾಡ್ತಾ ಇದ್ದಾರೆ. ಈಗಾಗಲೇ ಸಿನಿಮಾದ ಥೀಮ್ ಪೋಸ್ಟರ್, ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿದೆ.
ಪ್ರಸ್ತುತ ಸಿನಿಮಾ ತಂಡವು ಕೊನೆಯ ಹಂತದ ಶೂಟಿಂಗ್ ಗಾಗಿ ಪೋಲ್ಯಾಂಡ್ ನಲ್ಲಿದೆ.. ಪೋಲ್ಯಾಂಡ್ ನಿಂದ ದರ್ಶನ್ ಅವರು ಫೋಟೋ ಶೇರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ..
ವಿ. ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದರ ಜೊತೆಗೆ ಮ್ಯೂಸಿಕ್ ಕಂಪೋಸ್ಮಾಡ್ತಿದ್ದಾರೆ. ರಚಿತಾ ರಾಮ್ ನಾಯಕಿಯಾಗಿದ್ದಾರೆ… ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.. ಇನ್ನು ಸಿನಿಮಾದ ಕೆಲವು ಭಾಗವ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು, ಸಾಂಗ್ ಚಿತ್ರೀಕರಣಕ್ಕಾಗಿ ಸಿನಿಮಾತಂಡ ಸದ್ಯ ವಿದೇಶಕ್ಕೆ ಹಾರಿದೆ. ಈ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿ ತಿಳಿಸಿ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ..
ದರ್ಶನ್ ಜೊತೆಗೆ ರಚಿತಾ ರಾಮ್ , ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಅವರ ಪುತ್ರಿ ಪ್ರೈವೆಟ್ ಜೆಟ್ ನಲ್ಲಿ ವಿದೇಶಕ್ಕೆ ಪಯಣ ಬೆಳೆಸಿದ್ದರ ವಿಡಿಯೋವನ್ನ ಈ ಹಿಂದೆ ರಚಿತಾ ಹಂಚಿಕೊಂಡಿದ್ದರು.. ಫೇಸ್ ಬುಕ್ ನಲ್ಲಿ ಶೂಟಿಂಗ್ ಬಗ್ಗೆ ಮಾಹಿತಿ ನೀಡುತ್ತಾ ಚಿತ್ರದಲ್ಲಿನ ತಮ್ಮ ಹೊಸ ಲುಕ್ ಕೂಡ ರಿವೀಲ್ ಮಾಡಿದ್ದಾರೆ ದರ್ಶನ್. ಸ್ಯೂಟ್ ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ ಡಿ ಬಾಸ್..
“ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್ ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ”. ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ..