ಬೆಂಗಳೂರು : ಒಂದೆಡೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಮತ್ತೊಂದೆಡೆ ಸಚಿವರ ಮತ್ತು ಸಂಸದರ ನಡುವೆ ಟಾಕ್ ವಾರ್ ಜೋರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಆದ್ದರಿಂದ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಕ್ಕೆಂದು ಬೆಂಗಳೂರಿನ ಶಾಸಕರ ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆದಿದ್ದರು.
ಈ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮತ್ತು ಡಿಸಿಎಂ ಹಾಗೂ ರಾಮನಗರ ಉಸ್ತುವರಿ ಸಚಿವ ಸಿ.ಎನ್ ಅಶ್ವತ್ಥನಾರಾಯಣ ನಡುವೆ ಟಾಕ್ ವಾರ್ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್ , ಕೊರೊನಾ ವಿಚಾರದಲ್ಲಿ ಸರ್ಕಾರ ಏನು ಮಾಡತ್ತಿಲ್ಲ. ಜೊತೆಗೆ ವಿರೋಧ ಪಕ್ಷದ ಸಲಹೆಗಳನ್ನು ಪಡೆಯುತ್ತಿಲ್ಲ. ಮನಸಿಗೆ ಬಂದಾಗೆ ಆಡಳಿತ ಮಾಡುತ್ತಿದ್ದೀರಿ. ಈ ಕಾರಣಕ್ಕೆ ಕೊರೊನಾ ಹೆಚ್ಚಾಗುತ್ತಿದೆ. ಅಲ್ಲದೆ ನಮ್ಮ ಜಿಲ್ಲಾ ಉಸ್ತುವರಿ ಸಚಿವರಿಗೆ ಎಲ್ಲಿ, ಯಾವಗ, ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗೊತ್ತಿಲ್ಲ. ಸರಿಯಿಲ್ಲ ಅವರು ಎಂದು ಡಿಸಿಎಂ ಅಶ್ವತ್ಥನಾರಾಯಣ ವಿರುದ್ಧ ಡಿ.ಕೆ.ಸುರೇಶ್ ಗುಡುಗಿದ್ದಾರೆ. ಎನ್ನಲಾಗಿದೆ.
ಡಿ.ಕೆ.ಸುರೇಶ್ ಮಾತಿಗೆ ಕೆರಳಿದ ಅಶ್ವತ್ಥನಾರಾಯಣ, ನಾನು ಕೂಡ ಒಬ್ಬ ಜವಾಬ್ದಾರಿ ಇರುವ ವ್ಯಕ್ತಿ. ಉಪ-ಮುಖ್ಯಮಂತ್ರಿ, ಸಚಿವ ಎಂಬ ಪಟ್ಟಕ್ಕಿಂತ ಮೊದಲು ನಾನು ಕೂಡ ಮನುಷ್ಯ. ಅದನ್ನು ಸಂಸದರು ಮತ್ತು ಅವರ ಸಹೋದರ ಅರ್ಥ ಮಾಡಿಕೊಳ್ಳಬೇಕು. ರಾಮನಗರ ಜಿಲ್ಲೆಯಲ್ಲಿ ಆಗುತ್ತಿರುವ ಎಲ್ಲಾ ರಾಜಕೀಯಗಳು ನನಗೆ ಗೊತ್ತಿದೆ ಎನ್ನುವ ಮೂಲಕ ಡಿ.ಕೆ ಸುರೇಶ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ತೀರುಗೇಟು ನೀಡಿದ್ದಾರೆ ಎಂದು ಹೇಳಾಗುತ್ತಿದೆ.
ಅಲ್ಲದೆ ಜಿಲ್ಲೆಯಲ್ಲಿ ನಾವು ಎಲ್ಲಾ ರೀತಿಯ ನಿಯಂತ್ರಣ ಮಾಡುವ ಹೊತ್ತಿನಲ್ಲಿ ಸಂಸದರು ಮತ್ತು ಅವರ ಸಹೋದರರ ಬೆಂಬಲಿಗರು ಬಂದು ಗಲಾಟೆ ಮಾಡುವುದು ನನಗೆ ತಿಳಿದಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂಕಷ್ಟವನ್ನು ಸಂಸದರು ಮತ್ತು ಅವರ ಸಹೋದರರು ಸರಿಯಾಗಿ ಬಳಕೆ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಡಿ.ಕೆ ಬ್ರದರ್ಸ್ ಗೆ ಚಾಟಿ ಬೀಸಿದರು ಎಂದು ಮೂಲಗಳು ತಿಳಿಸಿವೆ.








