ಕೊವೀಡ್ ರಾತ್ರಿ ಮಾತ್ರ ಹರಡುತ್ತದೆ ಎಂದ ವಿಜ್ಞಾನಿಯ ಫೋಟೋ ಬೇಕಂತೆ ಡಿಕೆಶಿಗೆ D K Shivakumar
ಬೆಳಗಾವಿ : ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನೈಟ್ ಕಫ್ರ್ಯೂ ಜಾರಿ ಮಾಡಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಕೋಡಿಹಳ್ಳಿ ಚಂದ್ರಶೇಖರ್ ಬಂಧನ ಬಗ್ಗೆ ಮಾತನಾಡಿ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಬಂಧನವನ್ನ ನಾನು ಖಂಡಿಸುತ್ತೇನೆ.
ಪ್ರಜಾಪ್ರಭುತ್ವದಲ್ಲಿ ಬೇಡಿಕೆ ಇಡುವುದು, ಸಭೆ ನಡೆಸುವುದು, ಪ್ರತಿಭಟಿಸುವುದು ಸಾಮಾನ್ಯ. ಆದ್ರೆ ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸವನ್ನ ಮಾಡ್ತಿರೋದು ಸರಿಯಲ್ಲ.
ಸರಕಾರವೇ ಅವರ ಬಳಿ ಹೋಗಬೇಕು, ಇಲ್ಲ ಕರೆಸಿಕೊಂಡು ಸಮಸ್ಯೆ ಬಗೆಹರಿಸಬೇಕು. ಅವರನ್ನು ಅರೆಸ್ಟ್ ಮಾಡ್ತಿರೋದು ಸರಿಯಲ್ಲ ಎಂದು ಹೇಳಿದರು.
ನಮ್ಮ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿಂದೂತ್ವ ವಿರೋಧಿಯಲ್ಲ, ಮೌಢ್ಯವಿರೋಧಿ. ಒಬ್ಬೊಬ್ಬರು ದೇವರನ್ನ ನಂಬ್ತಾರೆ, ನಾವೆಲ್ಲ ನಂಬತೀವಿ, ಅವರು ನಂಬಲ್ಲ ಅಷ್ಟೆ ಎಂದರು.









