ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಡಿ.ಕೆ.ಶಿವಕುಮಾರ್ : ಜಗ್ಗೇಶ್
ಬೆಂಗಳೂರು : ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಡಿ.ಕೆ.ಶಿವಕುಮಾರ್ ಅವರು. ಅವರು ಅವತ್ತೂ ನನ್ನ ಫ್ರೆಂಡ್, ಇಂದಿಗೂ ಒಳ್ಳೆ ಫ್ರೆಂಡ್ ಎಂದು ನವರಸ ನಾಯಕ ಜಗ್ಗೇಶ್ ಅವರು ಹೇಳಿದ್ದಾರೆ.
ಸಿನಿಮಾರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈ ವೇಳೆ ರಾಜಕೀಯದ ವಿಚಾರವಾಗಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವತ್ತೂ ನನ್ನ ಸ್ನೇಹಿತ, ಇಂದಿಗೂ ಒಳ್ಳೆಯ ಸ್ನೇಹಿತ. ನನ್ನ ಸಹೋದರ ಇದ್ದಂತೆ ಅವರೇ ನನ್ನ ರಾಜಕೀಯಕ್ಕೆ ಕರೆತಂದ್ರು ಎಂದು ತಿಳಿಸಿದರು.
ಇನ್ನು ನಾನು ಯಾವತ್ತೂ ರಾಜಕೀಯಕ್ಕೆ ಬರಬೇಕು ಎಂದು ಅಂದುಕೊಂಡಿರಲಿಲ್ಲ. ನಾನು ಎಂದಿಗೂ ಕಲಾವಿದನೆ.
ವಾಟಾಳ್ ನಾಗರಾಜ್ ನಿನ್ಗೆ ತಾಕತ್ತಿದ್ರೆ ಬಂದ್ ಮಾಡು : ರೇಣುಕಾಚಾರ್ಯ
ರಾಜಕಾರಣಿಯಾಗಿ ಬೀದಿಯಲ್ಲಿ ನಿಂತು ಭಾಷಣ ಮಾಡಿಲ್ಲ. ಇಂದು ಬಿಜೆಪಿ ಸದಸ್ಯನಾಗಿ ಕೆಲಸ ಮಾಡುತ್ತಿದ್ದು, ನರೇಂದ್ರ ಮೋದಿ ಅವರು ಮುನ್ನಡೆಸುವ ಪಕ್ಷದಲ್ಲಿ ಇರುವುದೇ ನನ್ನ ಭಾಗ್ಯ ಎಂದು ಹೇಳಿದರು.
ಇದೇ ವೇಳೆ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ ಜಗ್ಗೇಶ್, ದ್ವಾರಕೇಶ್ ಅವರು ನನಗೆ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಅಂದು ದ್ವಾರಕೇಶ್ ಅವರು ನೀನು ರಜನಿಕಾಂತ್ ತರ ಕಾಣಿಸುತ್ತೀಯಾ ಎಂದಿದ್ದರು.
ಎರಡೂ ಸಿನಿಮಾಗಳು ಬರೋವರೆಗೂ ಸಂಬಳ ಅಂದ್ರೇನು ಅಂತಾನೆ ಗೊತ್ತಿರಲಿಲ್ಲ ಎಂದು ಚಿತ್ರರಂಗದಲ್ಲಿ ತಮ್ಮ ಆರಂಭದ ದಿನಗಳನ್ನು ನೆನಪು ಮಾಡಿಕೊಂಡರು.
`ಕೈ’ಗೆ ನಾಚಿಕೆಯಾಗಬೇಕು ಎಂದ ವಿಜಯೇಂದ್ರಗೆ ಪ್ರಶ್ನೆಗಳ ಸುರಿಮಳೆಗೈದ ಉಗ್ರಪ್ಪ
ಇನ್ನು ಚಿತ್ರರಂಗ, ನಟನೆ ನನಗೆ ಸಾಕಾಗಿದೆ. ಮಕ್ಕಳಿಗಾಗಿ ಏನಾದರೂ ಮಾಡಬೇಕು. ಒಂದೊಳ್ಳೆ ದಾರಿ ತೋರಿಸಬೇಕು ಅಂತ ಇದೀನಿ ಅಷ್ಟೆ. ಅವಕಾಶ ಸಿಕ್ಕರೆ ಮಾಡುತ್ತೇನೆ ಆದರೆ ನಾನು ಎಂದು ಹುಡುಕಿಕೊಂಡು ಹೋಗಲ್ಲ.
ಕೊರೊನಾ ಎಲ್ಲರಿಗೂ ಒಂದೊಳ್ಳೆ ಪಾಠ ಕಲಿಸಿದೆ ಎಂದ ಜಗ್ಗೇಶ್, ಇವತ್ತು ನಿನ್ನೆ ಸಿನಿಮಾರಂಗಕ್ಕೆ ಬಂದವರ ಮುಂದೆ ಕೈಒಡ್ಡಿ ಬದುಕಲ್ಲ. ಆ ಪರಿಸ್ಥಿತಿ ಬಂದರೆ ವಿಷ ಕುಡಿದು ಸತ್ತುಹೋಗುತ್ತೇನೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










